ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಹಗರಣಪೀಡಿತ ಸತ್ಯಂ ಕಂಪ್ಯೂಟರ್ಸ್ ಮತ್ತು ಚೆನ್ನೈ ಮೂಲಕ ಮನರಂಜನಾ ಸಂಸ್ಥೆ ಪಿರಮಿಡ್ ಸಾಯಿಮಿರಾದ ಎಲ್ಲ ಶೇರು ವ್ಯವಹಾರಗಳನ್ನು ರದ್ದುಪಡಿಸುವಂತೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಗೆ ಆದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹೂಡಲಾಗಿದೆ.

ಮರುಖರೀದಿ ಘೋಷಣೆಗಳ ಮೂಲಕ ಹೂಡಿಕೆದಾರರಿಗೆ ಆಮಿಷವೊಡ್ಡಲಾಗಿದೆ ಮತ್ತು ಅವರಿಗೆ ವಂಚನೆ ಎಸಗಲಾಗಿದೆ ಎಂಬ ಕಾರಣಕ್ಕೆ ಜನವರಿ 6 ಮತ್ತು 7ರ ನಡುವೆ ನಡೆದಿರುವ ಎಲ್ಲ ವ್ಯವಹಾರಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಆದರೆ, ಅರ್ಜಿದಾರ ಮೋಹನ್ ಲಾಲ್ ಶರ್ಮಾ ಎಂಬ ವಕೀಲರು ಸಲ್ಲಿಸಿರುವ ಈ ಅರ್ಜಿಯ ಕುರಿತು ತ್ವರಿತವಾಗಿ ವಿಚಾರಣಾ ದಿನಾಂಕ ತಿಳಿಸಲು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ನಿರಾಕರಿಸಿದೆ.

ಸತ್ಯಂ ತನ್ನ ಶೇರುಗಳ ಮರು ಖರೀದಿ ಪ್ರಸ್ತಾಪವನ್ನು ಮುಂದೊಡ್ಡಿದ್ದು, ಮಂಡಳಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂಬ ಸತ್ಯಂ ಹೇಳಿಕೆಯ ಬಗ್ಗೆ ಜನವರಿ 6ರಂದು ಮಾಧ್ಯಮಗಳ ವರದಿಗಳನ್ನು ವಕೀಲರು ಉಲ್ಲೇಖಿಸಿದ್ದಾರೆ. ಮಂಡಳಿಯ ನಿರ್ಧಾರ ಹೊರಬೀಳುವ ಮುನ್ನವೇ, 176 ರೂ. ಮುಖಬೆಲೆಯಲ್ಲಿ 246.6 ಲಕ್ಷ ಶೇರುಗಳು ಮಾರಾಟವಾದವು. ಆದರೆ ಸತ್ಯಂ ಹಗರಣ ಬಯಲಾದ ಬೆನ್ನಿಗೇ ಅವುಗಳ ಬೆಲೆ 30 ರೂ.ಗೆ ಪತನಗೊಂಡಿದ್ದವು ಎಂದು ಅವರು ವಿವರಿಸಿದ್ದಾರೆ.

ಖರೀದಿಸಿದ ಶೇರುಗಳ ವ್ಯವಹಾರ ರದ್ದುಗೊಳಿಸುವಲ್ಲಿ ಸೆಬಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಲ್ಫಾ: 1000 ಉದ್ಯೋಗ ಕಟ್
ಸತ್ಯಂ ಗ್ರಾಹಕರನ್ನು ನಾವಾಗಿಯೇ ಸಂಪರ್ಕಿಸುವುದಿಲ್ಲ: ಇನ್ಫಿ
ಸತ್ಯಂ ರಕ್ಷಣೆಗೆ 2000 ಕೋಟಿ ರೂ. ಪ್ಯಾಕೇಜ್?
ಭಾರತಕ್ಕೆ ಶರವೇಗದ ಟ್ರೇನ್
ವಿಪ್ರೋ ನಿಯಮ ಉಲ್ಲಂಘಿಸಿಲ್ಲ: ಮುಖ್ಯಸ್ಥ
ಸತ್ಯಂ ಪುನಶ್ಚೇತನ: ಪ್ರಧಾನಿ ನೇತೃತ್ವದಲ್ಲಿ ಸಭೆ