ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂಗೆ ಹಸ್ಕಿನ್ಸ್, ಕೆಪಿಎಂಜಿ ಜಂಟಿ ಆಡಿಟರ್‌ಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂಗೆ ಹಸ್ಕಿನ್ಸ್, ಕೆಪಿಎಂಜಿ ಜಂಟಿ ಆಡಿಟರ್‌ಗಳು
ದೇಶದ ಪ್ರಧಾನ ನಾಲ್ಕು ಲೆಕ್ಕಪತ್ರ ಘಟಕಗಳ ಭಾಗವಾಗಿರುವ ಡೆಲೊಯ್ಟ್ ಹಸ್ಕಿನ್ಸ್ ಎಂಡ್ ಸೆಲ್ಸ್ ಮತ್ತು ಕೆಪಿಎಂಜಿಗಳನ್ನು ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್‌ಗೆ ಜಂಟಿ ಸ್ವಾಯತ್ತ ಲೆಕ್ಕಪತ್ರಾಧಿಕಾರಿಗಳಾಗಿ (ಆಡಿಟರ್) ನೇಮಿಸಲಾಗಿದೆ.

ಕಳೆದ ಏಳು ವರ್ಷಗಳಿಂದ ಸುಳ್ಳು ಲೆಕ್ಕಪತ್ರ ತೋರಿಸಿರುವುದಾಗಿ ಸತ್ಯಂನ ಮಾಜಿ ಮುಖ್ಯಸ್ಥ ರಾಮಲಿಂಗ ರಾಜು ದೇಶದ ಅತಿದೊಡ್ಡ ಹಗರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡ ಬಳಿಕ, ರಚಿಸಲಾಗಿರುವ ತ್ರಿಸದಸ್ಯ ಸತ್ಯಂ ಮಂಡಳಿಯು, ಹೊಸ ಜಂಟಿ ಲೆಕ್ಕಪತ್ರಾಧಿಕಾರಿಗಳನ್ನು ಶೀಘ್ರವೇ ನೇಮಿಸುವುದಾಗಿ ಈ ಮೊದಲು ಹೇಳಿತ್ತು.

ಪ್ರಮುಖ ನಾಲ್ಕು ಅಕೌಂಟಿಂಗ್ ಸಂಸ್ಥೆಗಳಲ್ಲಿ ಹಸ್ಕಿನ್ಸ್, ಕೆಪಿಎಂಜಿ ಅಲ್ಲದೆ, ಸತ್ಯಂನ ಈ ಹಿಂದಿನ ಲೆಕ್ಕಪತ್ರ ಸಂಸ್ಥೆ ಪ್ರೈಸ್‌ವಾಟರ್‌ಕೂಪರ್ಸ್ ಕೂಡ ಸೇರಿತ್ತು. ಅರ್ನೆಸ್ಟ್ ಎಂಡ್ ಯಂಗ್ ಎಂಬುದು ಈ 'ಬಿಗ್ ಫೋರ್'ನ ಮತ್ತೊಂದು ಸದಸ್ಯ. ಸತ್ಯಂ ಮಂಡಳಿಯು ಈ ಪ್ರಧಾನ ನಾಲ್ಕು ಲೆಕ್ಕಪತ್ರ ಸಂಸ್ಥೆಗಳಿಂದಲೇ ಆಡಿಟರ್ ನೇಮಿಸಲು ಬಯಸಿದೆ ಎಂಬುದನ್ನು ಲೆಕ್ಕಪತ್ರಾಧಿಕಾರಿಗಳ ಪರಮೋಚ್ಚ ಸಂಸ್ಥೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೂಲಗಳು ಸ್ಪಷ್ಟಪಡಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಆಲ್ಫಾ: 1000 ಉದ್ಯೋಗ ಕಟ್
ಸತ್ಯಂ ಗ್ರಾಹಕರನ್ನು ನಾವಾಗಿಯೇ ಸಂಪರ್ಕಿಸುವುದಿಲ್ಲ: ಇನ್ಫಿ
ಸತ್ಯಂ ರಕ್ಷಣೆಗೆ 2000 ಕೋಟಿ ರೂ. ಪ್ಯಾಕೇಜ್?
ಭಾರತಕ್ಕೆ ಶರವೇಗದ ಟ್ರೇನ್
ವಿಪ್ರೋ ನಿಯಮ ಉಲ್ಲಂಘಿಸಿಲ್ಲ: ಮುಖ್ಯಸ್ಥ