ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂಬಯಿಯಲ್ಲಿ 6 ಲಕ್ಷಕ್ಕೆ ಫ್ಲ್ಯಾಟ್ ಲಭ್ಯ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬಯಿಯಲ್ಲಿ 6 ಲಕ್ಷಕ್ಕೆ ಫ್ಲ್ಯಾಟ್ ಲಭ್ಯ!
ಕಳೆದ ಒಂದು ವರ್ಷದಿಂದೀಚೆಗೆ ಸ್ಥಿರಾಸ್ಥಿ ಮಾರಾಟದಲ್ಲಿ ತೀವ್ರ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಬಿಲ್ಡರುಗಳು, ಡೆವಲಪರ್‌ಗಳು ಹೊಸ ತಂತ್ರಕ್ಕೆ ಮೊರೆ ಹೋಗುತ್ತಿದ್ದು, ಕೇವಲ 6 ಲಕ್ಷ ರೂ.ಗಳಿಗೆ ಮುಂಬಯಿಯಲ್ಲಿ ಫ್ಲ್ಯಾಟ್ ನೀಡುವುದಾಗಿ ಹೇಳುತ್ತಿವೆ.

ರಿಯಲ್ ಎಸ್ಟೇಟ್ ಡೆವಲಪರ್ಸ್‌ಗೆ ಸಂಬಂಧಿಸಿದ ಮಹಾರಾಷ್ಟ್ರ ಚೇಂಬರ್ ಆಫ್ ಹೌಸಿಂಗ್ ಇಂಡಸ್ಟ್ರಿ (ಎಂಸಿಎಚ್ಐ)ಯು ತನ್ನ ಮೊತ್ತ ಮೊದಲ ಪ್ರಾಪರ್ಟಿ ಫೇರ್ (ಸ್ಥಿರಾಸ್ಥಿ ಉತ್ಸವ) ಆಯೋಜಿಸಿದ್ದು, ಇದರಲ್ಲಿ 6 ಲಕ್ಷ ರೂ.ಗಳಿಂದ 49 ಲಕ್ಷ ರೂ.ವರೆಗಿನ ವಸತಿಗಳು ಮಾರಾಟಕ್ಕೆ ಲಭ್ಯ ಇವೆ. ಜನವರಿ 16ರಿಂದ 18ರವರೆಗೆ ಕಾಂದೀವಲಿ ವೆಸ್ಟ್‌ನ ರಘುಲೀಲಾ ಮಾಲ್‌ನಲ್ಲಿ ನಡೆಯುವ ಈ ಪ್ರಾಪರ್ಟಿ ಫೇರ್, ಪಶ್ಚಿಮ ಉಪನಗರಗಳಲ್ಲಿ ಲಭ್ಯಲಿರುವ ಫ್ಲ್ಯಾಟುಗಳ ಮೇಲೆ ಬೆಳಕು ಚೆಲ್ಲಲಿದೆ.

ಆಕ್ಮೆ ಗ್ರೂಪ್, ಆಕೃತಿಸಿಟಿ, ಎವರ್‌ಶೈನ್ ಬಿಲ್ಡರ್ಸ್, ಮೇಫೇರ್ ಗ್ರೂಪ್ ಮುಂತಾದ ಕಂಪನಿಗಳು ತಮ್ಮ ಬಜೆಟ್ ಗೃಹಗಳ ಮಾರಾಟಕ್ಕೆ ಇಲ್ಲಿ ಬಲೆ ಬೀಸಲಿವೆ. ಗೋರೆಗಾಂವ್, ವಿರಾರ್, ಥಾಣೆ ಮುಂತಾದ ಪ್ರದೇಶಗಳಲ್ಲಿ ಲಭ್ಯವಿರುವ ಮನೆಗಳನ್ನು ಇಲ್ಲಿ ವಿಶೇಷವಾಗಿಮ ಮಾರಾಟಕ್ಕಿಡಲಾಗುತ್ತಿದೆ.

ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಮ್ಹಾಡಾ) ಏರ್ಪಡಿಸಿದ್ದ ಪ್ರಾಪರ್ಟಿ ಫೇರ್‌ನಲ್ಲಿ ಫ್ಲ್ಯಾಟ್‌ಗಳ ಮಾರಾಟಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದ್ದು, ಇದರಿಂದ ಉತ್ತೇಜನಗೊಂಜು ಎಂಸಿಎಚ್ಐ ಕೂಡ ಈ ಕ್ರಮಕ್ಕೆ ಇಳಿದಿದೆ ಎಂದು ನಂಬಲಾಗಿದ್ದರೂ, ರಾಜೇಶ್ ಬಿಲ್ಡರ್ಸ್ ಸಂಸ್ಥೆಯ ಉಪಾಧ್ಯಕ್ಷ ಹರೀಶ್ ಪಟೇಲ್ ಅವರು ಇದನ್ನು ನಿರಾಕರಿಸುತ್ತಾರೆ.

ಬ್ಯಾಂಕುಗಳು ಕೂಡ ಉದಾರವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದಾರೆ. ಐದರಿಂದ 20 ಲಕ್ಷ ವರೆಗಿನ ಗೃಹಸಾಲದ ಬಡ್ಡಿದರಗಳು ಶೇ.8.5ರಿಂದ ಶೇ.9.25ರಷ್ಟು ಕಡಿಮೆ ಇವೆ. ದುಬಾರಿ ದರದಿಂದಾಗಿ ಗ್ರಾಹಕರು ತೋರುತ್ತಿದ್ದ ಅಸಡ್ಡೆಯಿಂದ ಎಚ್ಚೆತ್ತುಕೊಂಡಿರುವ ಬಿಲ್ಡರುಗಳು ಕೂಡ ಮನಬಂದಂತೆ ದರ ವಿಧಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಮನೆ ಕೊಳ್ಳಲು ಇದು ಸಕಾಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂಗೆ ಹಸ್ಕಿನ್ಸ್, ಕೆಪಿಎಂಜಿ ಜಂಟಿ ಆಡಿಟರ್‌ಗಳು
ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಆಲ್ಫಾ: 1000 ಉದ್ಯೋಗ ಕಟ್
ಸತ್ಯಂ ಗ್ರಾಹಕರನ್ನು ನಾವಾಗಿಯೇ ಸಂಪರ್ಕಿಸುವುದಿಲ್ಲ: ಇನ್ಫಿ
ಸತ್ಯಂ ರಕ್ಷಣೆಗೆ 2000 ಕೋಟಿ ರೂ. ಪ್ಯಾಕೇಜ್?
ಭಾರತಕ್ಕೆ ಶರವೇಗದ ಟ್ರೇನ್