ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪರದೇಶಕ್ಕೆ ಹಾರಿರುವ ಸತ್ಯಂ ದೊರೆಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರದೇಶಕ್ಕೆ ಹಾರಿರುವ ಸತ್ಯಂ ದೊರೆಗಳು
ಸತ್ಯಂನ ಮಧ್ಯಂತರ ಸಿಇಒ ರಾಮ್ ಮೈನಾಂಪತಿ ಮಾತ್ರ ಜಾಗಖಾಲಿ ಮಾಡಿದವರಲ್ಲ. ಇತರ ಇಬ್ಬರು ಉನ್ನತಾಧಿಕಾರಿಗಳೂ ಬೇರೆ ದೇಶದಲ್ಲಿ ಹೋಗಿ ಕುಳಿತಿದ್ದಾರೆ.

ಸೀನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಡೈರೆಕ್ಟರ್ ವೀರೇಂದ್ರ ಅಗರ್ವಾಲ್ ಅವರು ಸಿಂಗಾಪುರಕ್ಕೆ ತೆರಳಿದ್ದರೆ, ಇನ್ನೊಬ್ಬ ಸೀನಿಯರ್ ವೈಸ್ ಪ್ರೆಸಿಡೆಂಟ್ ಹಾಗೂ ಡೈರೆಕ್ಟರ್ ಕೇಶುಬ್ ಪಾಂಡಾ ಅವರು ಲಂಡನ್‌ಗೆ ತೆರಳಿದ್ದಾರೆ.

ಅಮೆರಿಕದಲ್ಲಿ ಹೋಗಿ ಕುಳಿತಿರುವ ಮೈನಾಂಪತಿ ಅಮೆರಿಕ ಪ್ರಜೆ. ಅವರೆಲ್ಲ ಕುಟುಂಬದ ಸದಸ್ಯರೂ ಅಮೆರಿಕ ಪಾಸ್‍ಪೋರ್ಟ್‌ಗಳನ್ನು ಹೊಂದಿದ್ದಾರೆ.

ಈ ಮೂವರೂ ಅಧಿಕಾರಿಗಳೂ ಗ್ರಾಹಕರ ನಂಬುಗೆಯನ್ನು ಮರುಗಳಿಸಲು ಹಾಗೂ ಬಾಕಿಯುಳಿದಿರುವ ಬಿಲ್ ಸಂಗ್ರಹಕ್ಕಾಗಿ ವಿದೇಶಗಳಿಗೆ ತೆರಳಿದ್ದಾರೆ ಎಂದು ಸತ್ಯಂನೊಳಗಿನವರು ಹೇಳುತ್ತಾರೆ.

ಆದರೆ, ಪೊಲೀಸ್ ತನಿಖೆ ಹಾಗೂ ಇತರ ನಿಯಂತ್ರಣಾ ಮಂಡಳಿಗಳ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಅವರು ದೇಶತೊರೆದಿರಬಹುದು ಎಂಬುದಾಗಿ ಸತ್ಯಂ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆನ್ನಲಾಗಿದೆ. ಅಲ್ಲದೆ ಮೈನಾಂಪತಿ ಮತ್ತೆ ಮರಳುವ ಸಾಧ್ಯತೆ ಅತ್ಯಲ್ಪ ಎಂದೂ ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬಯಿಯಲ್ಲಿ 6 ಲಕ್ಷಕ್ಕೆ ಫ್ಲ್ಯಾಟ್ ಲಭ್ಯ!
ಸತ್ಯಂಗೆ ಹಸ್ಕಿನ್ಸ್, ಕೆಪಿಎಂಜಿ ಜಂಟಿ ಆಡಿಟರ್‌ಗಳು
ಸತ್ಯಂ, ಸಾಯಿಮಿರಾ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ
ಆಲ್ಫಾ: 1000 ಉದ್ಯೋಗ ಕಟ್
ಸತ್ಯಂ ಗ್ರಾಹಕರನ್ನು ನಾವಾಗಿಯೇ ಸಂಪರ್ಕಿಸುವುದಿಲ್ಲ: ಇನ್ಫಿ
ಸತ್ಯಂ ರಕ್ಷಣೆಗೆ 2000 ಕೋಟಿ ರೂ. ಪ್ಯಾಕೇಜ್?