ಸತ್ಯಂ ಹಗರಣ ದಿನಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಸತ್ಯಂ ಲೆಕ್ಕ ಪರಿಶೋಧಕ ಕಂಪೆನಿಯಾದ ಪ್ರೈಸ್ ವಾಟರ್ ಹೌಸ್ ಸತ್ಯಂಗೆ ತಪ್ಪು ಪಾನ್ ನಂಬರ್ ನೀಡಿದೆ ಎನ್ನುವ ಸಂಗತಿ ಈದೀಗ ಬಹಿರಂಗವಾಗಿದೆ.
ಇನ್ಸ್ಟೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ಪೈಸ್ ವಾಟರ್ ಹೌಸ್ ಲೆಕ್ಕ ಪರಿಶೋಧಕ ಕಂಪೆನಿ ಸತ್ಯಂ ಸಂಸ್ಥೆಗೆ ತಪ್ಪು ಪಾನ್ ಸಂಖ್ಯೆ ನೀಡಿರುವುದು ಖಚಿತವಾಗಿದ್ದು, ಪರವಾನಿಗಿ ರದ್ದು ಸೇರಿದಂತೆ ಕಂಪೆನಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಇನ್ಸ್ಟೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾದಿಂದ ಸತ್ಯಂ ಹಗರಣವನ್ನು ತನಿಖೆ ನಡೆಸಲು ಅಗರ್ವಾಲ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸತ್ಯಂ ಸಂಸ್ಥೆ ಹೊಂದಿದ ಬೆಂಗಳೂರು ಪಾನ್ ಸಂಖ್ಯೆ ಹಾಗೂ ಹೈದ್ರಾಬಾದ್ ಪಾನ್ ಸಂಖ್ಯೆಗಳು ಐಸಿಎಐ ದಾಖಲೆಗಳು ಹಾಗೂ ವೆಬ್ಸೈಟ್ ಪ್ರಕಾರ ತಾಂತ್ರಿಕವಾಗಿ ನವದೆಹಲಿಯ ಆಧೀನದಲ್ಲಿರುತ್ತವೆ. ಆದರೆ ಪ್ರೈಸ್ ವಾಟರ್ಹೌಸ್ ಸಂಸ್ಥೆ ನೀಡಿದ ತಪ್ಪು ವಿವರಣೆಗಳಿಂದಾಗಿ ಕಾನೂನುಬಾಹಿರ ಕೃತ್ಯ ಎಸಗಿದೆ ಎನ್ನುವುದು ಸಾಬೀತಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಹೈದ್ರಾಬಾದ್ನಲ್ಲಿರುವ ಪಿಡಬ್ಲೂಸಿ ನವದೆಹಲಿಯ ಶಾಖೆಯಾಗಿದ್ದು, ಪಿಡ್ವೂಸಿ ಬೆಂಗಳೂರಿಗೂ ಹಾಗೂ ಪಿಡಬ್ಲೂಸಿ ಹೈದ್ರಾಬಾದ್ಗೂ ಯಾವುದೇ ಸಂಬಂಧವಿಲ್ಲ. ಕಂಪೆನಿಯಲ್ಲಿ ನಮೂದಿಸಿದ ಪಾನ್ ಸಂಖ್ಯೆ ಬೆಂಗಳೂರಿಗೆ ಸಂಬಧಿಸಿದ್ದು ವಿಳಾಸ ಹೈದ್ರಾಬಾದ್ಗೆ ಸಂಬಂಧಿಸಿರುವುದು ನೋಡಿದಲ್ಲಿ ಬೋಗಸ್ ಕಂಪೆನಿಯ ಹೆಸರಿನಲ್ಲಿ ಅರ್ಜಿಯನ್ನು ಭರಿಸಲಾಗಿದೆ ಎಂದು ಹೈದ್ರಾಬಾದ್ ಮೂಲದ ಹಿರಿಯ ಲೆಕ್ಕಪರಿಶೋಧಕರಾದ ಸುನೀಲ್ ಅಪ್ಪಾಜಿ ಸಂಶಯ ವ್ಯಕ್ತಪಡಿಸಿದ್ದಾರೆ. |