ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಿಇಒ ಕರೋಲ್‌ಗೆ 19 ಮಿಲಿಯನ್ ಡಾಲರ್ ವೇತನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಇಒ ಕರೋಲ್‌ಗೆ 19 ಮಿಲಿಯನ್ ಡಾಲರ್ ವೇತನ
ಯಾಹೂ ಕಂಪೆನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಕರೋಲ್ ಬರ್ಟ್ಝ್, ಬೋನಸ್ ಮತ್ತು ಶೇರುಗಳ ಪಾಲುದಾರಿಕೆ ಸೇರಿದಂತೆ ವಾರ್ಷಿಕವಾಗಿ 19 ಮಿಲಿಯನ್ ಡಾಲರ್‌ಗಳ ಭತ್ಯೆಯನ್ನು ಪಡೆಯಲಿದ್ದಾರೆ ಎಂದು ಯಾಹೂ ಕಂಪೆನಿ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಪ್ರಸಕ್ತ ವಾರದಲ್ಲಿ ಕರೋಲ್ ಬರ್ಟ್ಝ್ ನೇಮಕಾತಿಯನ್ನು ಯಾಹೂ ಕಂಪೆನಿ ಖಚಿತಪಡಿಸಿದ್ದು, ಮಾರಾಟ, ಮತ್ತು ಮೆಕ್ರೋಸಾಫ್ಟ್‌‌ನೊಂದಿಗೆ ಸರ್ಚ್ ಡೀಲ್‌ ಕುರಿತಂತೆ ಕಂಪೆನಿಯ ಒಪ್ಪಂದಗಳ ಮಹತ್ವದ ನಿರ್ಧರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಯಾಹೂ ಕಂಪೆನಿ ತಿಳಿಸಿದೆ.

ಬರ್ಟ್ಝ್ ಯಾಹೂ ಕಂಪೆನಿಯಿಂದ ವಾರ್ಷಿಕವಾಗಿ 1 ಮಿಲಿಯನ್ ಡಾಲರ್ ವೇತನ ನಿಗದಿಪಡಿಸಲಾಗಿದ್ದು, 10 ಮಿಲಿಯನ್ ಡಾಲರ್‌ ಹಣವನ್ನು ಶೇರುಗಳ ರೂಪದಲ್ಲಿ ಪಡೆಯಲಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಸುಮಾರು 8 ಮಿಲಿಯನ್ ಡಾಲರ್ ಶೇರು ಅನುದಾನವನ್ನು ಪಡೆಯಲಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಯಾಹೂ ಕಂಪೆನಿಯ ಅಡಳಿತ ಮಂಡಳಿಯ ಪರಿಹಾರ ಸಮಿತಿ, ಕಂಪೆನಿಯ ನೀತಿ ಹಾಗೂ ಸಿಇಒ ಕಾರ್ಯದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುವ ವಾರ್ಷಿಕ 2 ಮಿಲಿಯನ್‌ಗಳಿಂದ 4 ಮಿಲಿಯನ್‌ಗಳವರೆಗಿನ ಬೋನಸ್‌ ಭತ್ಯೆಯನ್ನು ಕರೋಲ್ ಪಡೆಯಲಿದ್ದಾರೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಕನ್ಸಲ್‌ಟನ್ಸಿಗೆ ಶೇ.2ರಷ್ಟು ನಿವ್ವಳ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಪ್ರೈಸ್ ‌ವಾಟರ್‌ನಿಂದ ಸತ್ಯಂಗೆ ತಪ್ಪು 'ಪಾನ್' ಸಂಖ್ಯೆ
ಉದ್ಯೋಗಿಗಳ ವೇತನ ಪಾವತಿಗೆ ಆದ್ಯತೆ:ಮನೋಹರನ್
2009ರಲ್ಲಿ ಚಿನ್ನದ ದರ ದಾಖಲೆಯ ಹೆಚ್ಚಳ ?
50 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದ ಸತ್ಯಂ ರಾಜು?