ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೇಡಿಕೆ ಕುಸಿತ ಹಾಗೂ ಅಮೆರಿಕದ ದುರ್ಬಲ ಆರ್ಥಿಕತೆಯಿಂದಾಗಿ ಏಷ್ಯಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ದರ 35 ಡಾಲರ್ಗಳಿಗೆ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.ಸಿಂಗಾಪೂರ್ ತೈಲ ಮಾರುಕಟ್ಟೆಯಲ್ಲಿ ಸಾದಾ ಕಚ್ಚಾ ತೈಲ ಫೆಬ್ರವರಿ ತಿಂಗಳ ವಿತರಣೆ ಪ್ರತಿ ಬ್ಯಾರೆಲ್ಗೆ 35.38 ಡಾಲರ್ಗಳಿಗೆ ನಿಗದಿಯಾಗಿದ್ದು,ನ್ಯೂಯಾರ್ಕ್ ತೈಲ ಮಾರುಕಟ್ಟೆಯಲ್ಲಿ 35.40ಡಾಲರ್ಗಳಿಗೆ ತಲುಪಿದೆ. ಕಾರ್ಪೋರೇಟ್ ತ್ರೈಮಾಸಿಕ ಫಲಿಂತಾಶ ಹಾಗೂ ಆರ್ಥಿಕತೆ ಕುಸಿತದಿಂದಾಗಿ ಕಳೆದ ವಾರ ಪ್ರತಿ ಬ್ಯಾರೆಲ್ಗೆ 50.47 ಡಾಲರ್ಗಳಿಗೆ ತಲುಪಿದ್ದ ತೈಲ ದರ ಶೇ.30 ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಜಗತ್ತಿನ ಬೃಹತ್ ತೈಲ ಗ್ರಾಹಕ ದೇಶವಾದ ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ತೈಲ ಬೇಡಿಕೆಯಲ್ಲಿ ಕುಸಿತವಾಗುತ್ತಿರುವುದಕ್ಕೆ ತೈಲ ಮಾರುಕಟ್ಟೆಗಳು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. |