ಭಾರತೀಯ ರಿಸರ್ವ್ ಬ್ಯಾಂಕ್ ತ್ರೈಮಾಸಿಕದಲ್ಲಿ ರೆಪೊ ರಿವರ್ಸ್ ರೆಪೊ ದರಗಳನ್ನು ಕಡಿತ ಮಾಡುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಕಡಿತ ಮಾಡುತ್ತದೆ ಎಂದು ನಾವು ನಿರೀಕ್ಷಿಸಿಲ್ಲ ರೆಪೊ ,ರಿವರ್ಸ್ ರೆಪೊ ಮತ್ತು ಕ್ಯಾಶ್ ರಿಸರ್ವ್ ರೇಶಿಯೊಗಳನ್ನು ಸದ್ಯಕ್ಕೆ ಕಡಿತವಾಗುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಗಳ ಏರಿಳಿಕೆಯನ್ನು ಗಮನನದಲ್ಲಿಟ್ಟುಕೊಂಡು ಅಗತ್ಯವಾದಲ್ಲಿ ಜನೆವರಿ 27 ರಂದು ಆರ್ಥಿಕ ನೀತಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿಕೆ ನೀಡಿತ್ತು.ಕೇಂದ್ರ ರಿಸರ್ವ್ ಬ್ಯಾಂಕ್ ಜನೆವರಿ 4 ರಂದು ರೆಪೊ ಹಾಗೂ ರಿವರ್ಸ್ ರೆಪೊ ದರದಲ್ಲಿ 100 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಿ, ಕ್ಯಾಶ್ ರಿಸರ್ವ್ ರೇಶಿಯೊವನ್ನು ಶೇ5 ರಷ್ಟು ಇಳಿಕೆ ಮಾಡಿ ಆದೇಶ ಹೊರಡಿಸಿತ್ತು. |