ಗೃಹ ಸಾಲ ನೀಡುವ ದೇಶದ ಪ್ರಮುಖ ಬ್ಯಾಂಕ್ ಎಚ್ಡಿಎಫ್ಸಿ, 30 ಲಕ್ಷದೊಳಗಿನ ಗೃಹ ಸಾಲಕ್ಕೆ ಶೇ. 9.75ರಷ್ಟು ಬಡ್ಡಿದರವನ್ನು ಇಳಿಕೆ ಮಾಡಿ ಮೂರು ವರ್ಷಗಳಲ್ಲಿ ಕಡಿಮೆ ಬಡ್ಡಿ ದರವನ್ನು ಘೋಷಿಸಿದೆ. ಹೊಸದಾಗಿ ಗೃಹ ಸಾಲ ಪಡೆಯುವ ಗ್ರಾಹಕರಿಗೆ ನಿಗದಿತ ಅವಧಿಯ 30 ಲಕ್ಷದೊಳಗಿನ ಗೃಹ ಸಾಲಕ್ಕೆ ಶೇ.9.75 ಹಾಗೂ 30 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಶೇ.10.75 ರಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಬಡ್ಡಿ ದರ ಕಡಿತ ಘೋಷಣೆಗಿಂತ ಮೊದಲು 20 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ.10.25 ರಷ್ಟು ಹಾಗೂ 20 ಲಕ್ಷಕ್ಕಿಂತ ಮೇಲ್ಪಟ್ಟ ಸಾಲಕ್ಕೆ 11.25 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಿತ್ತು. ನೂತನ ಬಡ್ಡಿ ದರಗಳು ನಿಗದಿತ ಅವಧಿಗೆ ಮಾತ್ರ ಸೀಮಿತವಾಗಿದ್ದು, ಠೇವಣಿ ಬಡ್ಡಿ ದರ ಕಡಿತ ನಿನ್ನೆಯಿಂದ ಜಾರಿಗೆ ಬಂದಿದೆ ಎಂದು ಎಚ್ಡಿಎಫ್ಸಿ ಬ್ಯಾಂಕ್ನ ಜಂಟಿ ವ್ಯವಸ್ಥಾಪಕಿ ರೇಣು ಸುದ್ ಕರ್ನಾಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಾಲ ಪಡೆಯುವ ವೆಚ್ಚದಲ್ಲಿ ಕಡಿತವಾದ ಕಾರಣ ಕಡಿತದ ಲಾಭವನ್ನು ಬ್ಯಾಂಕ್ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಚ್ಡಿಎಫ್ಸಿ ಬ್ಯಾಂಕ್ನ ಜಂಟಿ ವ್ಯವಸ್ಥಾಪಕಿ ರೇಣು ಸುದ್ ಕರ್ನಾಡ್ ಹೇಳಿದ್ದಾರೆ. |