ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಸಿಟಿ ಗ್ರೂಪ್ ಬ್ಯಾಂಕ್ ನಾಲ್ಕನೇ ತ್ರೈಮಾಸಿಕದಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ಮತ್ತು ಐದವೇ ತ್ರೈಮಾಸಿಕದಲ್ಲಿ ನಿರಂತರ ನಷ್ಟ ಎದುರಿಸುತ್ತಿರುವ ಸಿಟಿ ಗ್ರೂಪ್, ಸಿಟ ಕಾರ್ಪ್ ಮತ್ತು ಸಿಟಿ ಹೋಲ್ಡಿಂಗ್ ಎಂದು ಕಂಪೆನಿಯನ್ನು ಬೇರ್ಪಡಿಸಿದೆ ಮಾಡಿದೆ ಎಂದು ಬ್ಯಾಂಕ್ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ನಿರಂತರ ನಷ್ಟವನ್ನು ಎದುರಿಸುತ್ತಿರುವುದರಿಂದ ಸಿಟಿ ಗ್ರೂಪ್ ಸಂಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ನಷ್ಟವನ್ನು ಲಾಭದತ್ತ ಪರಿವರ್ತಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಸಿಟಿ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಭಾರತೀಯ ಮೂಲದ ವಿಕ್ರಮ್ ಪಂಡಿತ್ ತಿಳಿಸಿದ್ದಾರೆ |