ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಡಿಪಿ ದರ ಶೇ.7 ರಿಂದ ಶೇ.7.5ರಷ್ಟಾಗಲಿದೆ:ಚಾವ್ಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ದರ ಶೇ.7 ರಿಂದ ಶೇ.7.5ರಷ್ಟಾಗಲಿದೆ:ಚಾವ್ಲಾ
PTI
ಪ್ರಸಕ್ತ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಆರ್‌ಬಿಐ ಘೋಷಿಸಿರುವುದಕ್ಕಿಂತ ಕಡಿಮೆಯಾಗಲಿದ್ದು, ವರ್ಷಾರಂಭದ ಆರು ತಿಂಗಳಲ್ಲಿ ಶೇ.7 ರಿಂದ ಶೇ.7.5 ರಷ್ಟು ಆರ್ಥಿಕ ಅಭಿವೃದ್ಧಿ ದರ ದಾಖಲಾಗುವ ಸಾಧ್ಯತೆಗಳಿವೆ ಎಂದು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಲಿಂದ ಉತ್ತಮ ಅಭಿವೃದ್ಧಿ ದರವನ್ನು ಕಾಯ್ದುಕೊಂಡು ಬಂದಿದ್ದು, ಪ್ರಸಕ್ತ ವರ್ಷದಲ್ಲಿ ಶೇ.7 ರಿಂದ ಶೇ.7.5 ರಷ್ಟಾಗಲಿದೆ ಎಂದು ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ.

ಪ್ರಸಕ್ತ ವರ್ಷದ ಆರಂಭದ ಆರು ತಿಂಗಳಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.7.8 ರಷ್ಟಾಗಲಿದ್ದು, ಕಳೆದ ವರ್ಷ ಆರ್ಥಿಕ ಅಭಿವೃದ್ಧಿ ದರ ಶೇ.9.3 ರಷ್ಟು ದಾಖಲಾಗಿತ್ತು ಎಂದು ಹೇಳಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಕೈಗಾರಿಕೆ ಅಭಿವೃದ್ಧಿ ನಕಾರಾತ್ಮಕವಾಗಿದ್ದು, ನವೆಂಬರ್ ತಿಂಗಳಿನಲ್ಲಿ ಕೇವಲ ಶೇ.2.4 ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿ ದರ ನಿರೀಕ್ಷೆಗಿಂತ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.5 ರಿಂದ ಶೇ.8 ರಷ್ಟಾಗುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿತ್ತು.

ಕೇಂದ್ರ ಸರಕಾರ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಹಣ ಚಲಾವಣೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದು, ಕೈಗಾರಿಕಾಭಿವೃದ್ಧಿಗಾಗಿ ಪ್ಯಾಕೇಜ್‌ಗಳನ್ನು ಕೂಡಾ ಘೋಷಿಸಿದೆ ಎಂದು ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತ:ಸಿಟಿ ಗ್ರೂಪ್‌ಗೆ 40 ಸಾ. ಕೋಟಿ ನಷ್ಟ
ಗೃಹ ಸಾಲ ಬಡ್ಡಿ ಕಡಿತ: ಎಚ್‌ಡಿಎಫ್‌ಸಿ
ಸದ್ಯಕ್ಕೆ ರೆಪೊ ದರಗಳ ಕಡಿತವಿಲ್ಲ: ಆರ್‌ಬಿಐ
ಇಂದು ಸತ್ಯಂ ಅಡಳಿತ ಮಂಡಳಿ ಸಭೆ
ಏರ್‌ಟೆಲ್ 'ವ್ಯಾಟ್' ವ್ಯಾಪ್ತಿಗೆ
ಔಷಧ ರಫ್ತಿಗೆ ಯುರೋಪ್ ತಡೆ: ಭಾರತ