ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಬರ್ಲಿನ್ : ಯುರೋಪ್‌ಗೆ ಅನಿಲ ಸರಬರಾಜು ಕುರಿತಂತೆ ಉಕ್ರೇನ್‌ನೊಂದಿಗಿನ ವಿವಾದದಿಂದಾಗಿ ದೇಶದ ಹಿತಾಸಕ್ತಿಗೆ ಧಕ್ಕೆ ತಂದಿದ್ದು ಶೀಘ್ರದಲ್ಲಿ ಬಿಕ್ಕಟ್ಟು ಪರಿಹಾರವಾಗಲಿದೆ ಎಂದು ರಷ್ಯಾದ ಪ್ರಧಾನ ಮಂತ್ರಿ ವ್ಲಾಡಿಮರ್ ಪುಟಿನ್ ಹೇಳಿದ್ದಾರೆ.

ವಿವಾದವನ್ನು ಬಗೆಹರಿಸಲು ಉಕ್ರೇನ್‌ ದೇಶದೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಪರಿಶೀಲಿಸುತ್ತಿದ್ದು ಕೆಲ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಜರ್ಮನ್ ಚಾನ್ಸೆಲ್ಲರ್‌ ಅಂಜೆಲಾ ಮೆರ್ಕಲ್‌ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪುಟಿನ್, ಯುರೋಪ್‌ನ ಪ್ರಮುಖ ಇಂಧನ ಕಂಪೆನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸಿದ್ದು, ಸಮಸ್ಯೆಗಳ ಇತ್ಯರ್ಥಕ್ಕೆ ಉಭಯ ದೇಶಗಳ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

ರಷ್ಯಾದ ಉಪಪ್ರಧಾನ ಮಂತ್ರಿ ಐಗೊರ್ ಸೆಚಿನ್ ಮಾತನಾಡಿ, ರಷ್ಯಾದ ಇಂಧನ ದೈತ್ಯ ಕಂಪೆನಿಯಾದ ಗಾಝ್‌ಪ್ರೊಮ್, ಜರ್ಮನಿಯ ಇ.ಆನ್.ರುಹರ್‌ಗ್ಯಾಸ್ ವಿಂಗಾಸ್ ಮತ್ತು ಫ್ರಾನ್ಸ್ ,ಇಟಲಿ ಕಂಪೆನಿಗಳು ಸಮಿತಿಯಲ್ಲಿ ಸೇರ್ಪಡೆಯಾಗುವ ಆಸಕ್ತಿ ವ್ಯಕ್ತಪಡಿಸಿವೆ ಎಂದು ರಷ್ಯಾದ ಪ್ರಧಾನಿ ವ್ಲಾಡಿಮರ್ ಪುಟಿನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
ಜೆಟ್‌ಗೆ 200 ಕೋಟಿ ನಷ್ಟ
52 ಸಾವಿರ ಉದ್ಯೋಗಿಗಳ ವಜಾ
ಜಿಡಿಪಿ ದರ ಶೇ.7 ರಿಂದ ಶೇ.7.5ರಷ್ಟಾಗಲಿದೆ:ಚಾವ್ಲಾ
ಆರ್ಥಿಕ ಕುಸಿತ:ಸಿಟಿ ಗ್ರೂಪ್‌ಗೆ 40 ಸಾ. ಕೋಟಿ ನಷ್ಟ
ಗೃಹ ಸಾಲ ಬಡ್ಡಿ ಕಡಿತ: ಎಚ್‌ಡಿಎಫ್‌ಸಿ