ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ
PTI
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ವಹಿವಾಟು ಏರಿಕೆಯಾಗಿದ್ದು, ಚಿನ್ನದ ವಹಿವಾಟುದಾರರು ಹೆಚ್ಚಿನ ಚಿನ್ನದ ಸಂಗ್ರಹದಲ್ಲಿ ತೊಡಗಿದ್ದರಿಂದ 10 ಗ್ರಾಂ ಚಿನ್ನಕ್ಕೆ 240 ರೂಪಾಯಿ ಏರಿಕೆಯಾಗಿ 13,400 ರೂ.ಗಳಿಗೆ ತಲುಪಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಯುರೋ ಎದುರು ಡಾಲರ್‌ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಚಿನ್ನದ ದರಗಳಲ್ಲಿ ಏರಿಕೆಯಾಗಿ 10 ಗ್ರಾಂ ಚಿನ್ನದ ದರದಲ್ಲಿ ಶೇ.4 ರಷ್ಟು ಏರಿಕೆಯಾಗಿದೆ.

ಚಿನ್ನದ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಚಿನಿವಾರ ಪೇಟೆಯಲ್ಲಿ ಹೂಡಿಕೆದಾರರಿಂದಾಗಿ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಟ್ಯಾಂಡರ್ಡ್‌ ಗೋಲ್ಡ್‌ ಮತ್ತು ಆಭರಣಗಳ ಚಿನ್ನ ಪ್ರತಿ 10 ಗ್ರಾಂಗೆ 240 ರೂಪಾಯಿ ಏರಿಕೆಯಾಗಿ 13,400 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿ ದರದಲ್ಲಿ ಕೂಡಾ ಪ್ರತಿ ಕೆ.ಜಿಗೆ 550 ರೂಪಾಯಿಗಳ ಏರಿಕೆಯಾಗಿ 18,350 ರೂ.ಗಳಿಗೆ ತಲುಪಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್
ಜೆಟ್‌ಗೆ 200 ಕೋಟಿ ನಷ್ಟ
52 ಸಾವಿರ ಉದ್ಯೋಗಿಗಳ ವಜಾ
ಜಿಡಿಪಿ ದರ ಶೇ.7 ರಿಂದ ಶೇ.7.5ರಷ್ಟಾಗಲಿದೆ:ಚಾವ್ಲಾ
ಆರ್ಥಿಕ ಕುಸಿತ:ಸಿಟಿ ಗ್ರೂಪ್‌ಗೆ 40 ಸಾ. ಕೋಟಿ ನಷ್ಟ