ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಸತ್ಯಂ' ವಂಚನೆ ದೊಡ್ಡ ಪಾಠವಾಗಲಿ: ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸತ್ಯಂ' ವಂಚನೆ ದೊಡ್ಡ ಪಾಠವಾಗಲಿ: ಪ್ರಧಾನಿ
ಹೈದರಾಬಾದ್‌ನ ಸತ್ಯಂ ಮಹಾವಂಚನೆ ಪ್ರಕರಣ ದೇಶದ ಕಾರ್ಪೊರೇಟ್ ವಲಯಕ್ಕೆ ಅಂತಿದ ದೊಡ್ಡ ಕಳಂಕ ಎಂದು ಪ್ರಧಾನಿ ಮನಮೋಹನ್ ಸಿಂಗ್ ಖೇದ ವ್ಯಕ್ತಪಡಿಸಿದ ಅವರು, ದೇಶದ ಉದ್ಯಮ ವಲಯಕ್ಕೆ ಸತ್ಯ ಹಗರಣ ದೊಡ್ಡ ಪಾಠವಾಗಲಿ, ಕಂಡೂ ಕಾಣದ ಮೋಸದ ಚಟುವಟಿಕೆ ಕೈಬಿಡಲಿ, ಎಲ್ಲ ಕಂಪೆನಿಗಳೂ ತಮ್ಮ ಆಡಳಿತ ವ್ಯವಸ್ಥೆ ಪಾರದರ್ಶಕಗೊಳಿಸಿ ಸುಭದ್ರತೆ ಭಾವನೆ ಮೂಡಿಸಲಿ ಎಂದರು.

ಸತ್ಯಂ ಕಂಪ್ಯೂಟರ್ಸ್ ಅಂದಿನ ಅಧ್ಯಕ್ಷ ರಾಮಲಿಂಗ ರಾಜೂು 7,800 ಕೋಟಿ ರೂ.ವಂಚನೆಯ ತಪ್ಪೊಪ್ಪಿಗೆ ಪತ್ರ ಬರೆದು ಹಗರಣ ಜಗಜ್ಜಾಹೀರಾದ ನಂತರ ಇದೇ ಪ್ರಥಮ ಬಾರಿಗೆ ಪ್ರಧಾನಿ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಕಂಡೂ ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ, ಆಳದಲ್ಲಿ ಅಡಗಿರುವ ವಂಚನೆಯ ಬೇರನ್ನೂ ಹೊರತೆಗೆದು ಅಪರಾಧಿಗಳನ್ನು ಶಿಕ್ಷೆಗೊಳಪಡಿಸುವುದಕ್ಕೆ ಸರ್ಕಾರ ಬದ್ದ ಎಂದು ಅವರು ಸ್ಪಷ್ಟಪಡಿಸಿದರು. ಆ ಮೂಲಕ ಪ್ರತಿಸ್ಠಿತ ವ್ಯಕ್ತಿಗಳು ವಂಚನೆ ನಡೆಸಿ ತಪ್ಪಿಸಿಕೊಳ್ಳಲು ಅವಕಾಶ ಇಲ್ಲ ಎಂಬುದನ್ನು ಸೂಚಿಸಿದ್ದಾರೆ.

ಉನ್ನತ ಸಿದ್ದಾಂತ, ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಉದ್ಯಮಗಳು ಸರ್ಕಾರಕ್ಕೆ ಶಕ್ತಿ ತುಂಬಬೇಕಿದೆ. ಆ ಮೂಲಕ ಸತ್ಯಂನಂತಹ ಹಗರಣ ಹೊರತಾಗಿಯೂ ನಮ್ಮ ಸಾಮರ್ಥ್ಯ ಕುಗ್ಗಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಡಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ: ಸಿಇಒಗಾಗಿ ಹುಡುಕಾಟ
ಫೆಡರಲ್ ಬ್ಯಾಂಕ್: 204ಕೋಟಿ ರೂ.ನಿವ್ವಳ ಲಾಭ
ಸತ್ಯಂ ಮುಖ್ಯಸ್ಥರಾಗಿ ಟಿ.ಎನ್‌ ಮನೋಹರನ್
ಚಿನ್ನದ ದರದಲ್ಲಿ 240 ರೂಪಾಯಿ ಏರಿಕೆ
ಉಕ್ರೇನ್‌ ವಿವಾದ ಶೀಘ್ರದಲ್ಲಿ ಇತ್ಯರ್ಥ:ಪುಟಿನ್
ಒಬಾಮಾ ಔತಣಕೂಟಕ್ಕೆ ಇಂದ್ರಾನೂಯಿ ಹಾಜರ್