ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್ ಒಪ್ಪಂದ ಜಾರಿಗೆ ಸಮಯ ಅಗತ್ಯ :ಮಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್ ಒಪ್ಪಂದ ಜಾರಿಗೆ ಸಮಯ ಅಗತ್ಯ :ಮಲ್ಯ
PTI
ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಹಾಗೂ ಜೆಟ್‍‌‌ಏರ್‌ವೇಸ್ ಮೈತ್ರಿ ಸಂಪೂರ್ಣ ಕಾರ್ಯರೂಪಕ್ಕೆ ಬರಲು ಸುಮಾರು ಆರು ತಿಂಗಳು ಸಮಯವಕಾಶ ಅಗತ್ಯವಿದೆ ಎಂದು ಕಿಂಗ್‌ಫಿಶರ್ ಮುಖ್ಯಸ್ಥ ವಿಜಯ್ ಮಲ್ಯ ಹೇಳಿದ್ದಾರೆ.

ಉಭಯ ವಿಮಾನಯಾನ ಸಂಸ್ಥೆಗಳು ಹಲವು ವಿಭಾಗಗಳಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆಯುತ್ತಿದ್ದು, ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಮಯದ ಅಗತ್ಯವಿದೆ ಎಂದು ಮಲ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಿಂಗ್‌ಫಿಶರ್ ಅಥವಾ ಜೆಟ್‌ಏರ್‌ವೇಸ್ ನಿಗದಿಪಡಿಸಿದ ವಿಮಾನ ಹಾರಾಟವನ್ನು ಏಕಕಾಲಕ್ಕೆ ಬದಲಿಸುವುದು ಸುಲಭದ ಕಾರ್ಯವಲ್ಲ ಎಂದು ಉದ್ಯಮಿ ವಿಜಯ್ ಮಲ್ಯ ತಿಳಿಸಿದ್ದಾರೆ.

ಮುಂದಿನ ಮೂರು ತಿಂಗಳಿನಿಂದ ಆರು ತಿಂಗಳುಗಳವರೆಗೆ ಮೈತ್ರಿ ಸಂಪೂರ್ಣವಾಗಿ ಜಾರಿಯಾಗುವುದೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಯ, ಖಂಡಿತ ಶೇ.100 ರಷ್ಟು ಜಾರಿಗೆ ಬರಲಿದೆ. ಉಭಯ ವಿಮಾನಯಾನ ಸಂಸ್ಥೆಗಳಿಗೂ ತೊಂದರೆಯಾಗದಂತೆ ಒಪ್ಪಂದವನ್ನು ಸೂಕ್ಷ್ಮವಾಗಿ ಜಾರಿಗೊಳಿಸಲಾಗುವುದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿಯಲ್ಲಿ ಉದ್ಯೋಗವೇ ಬೇಡ..!
ಸ್ವತಂತ್ರ ನಿರ್ದೇಶಕರ ಅಗತ್ಯವಿದೆ: ರಾವ್
'ಸತ್ಯಂ' ವಂಚನೆ ದೊಡ್ಡ ಪಾಠವಾಗಲಿ: ಪ್ರಧಾನಿ
ಸತ್ಯಂ: ಸಿಇಒಗಾಗಿ ಹುಡುಕಾಟ
ಫೆಡರಲ್ ಬ್ಯಾಂಕ್: 204ಕೋಟಿ ರೂ.ನಿವ್ವಳ ಲಾಭ
ಸತ್ಯಂ ಮುಖ್ಯಸ್ಥರಾಗಿ ಟಿ.ಎನ್‌ ಮನೋಹರನ್