ಏಷ್ಯಾ ಶೇರುಪೇಟೆಗಳ ಚೇತರಿಕೆಯ ಹಿನ್ನೆಲೆಯಲ್ಲಿ ಡಾಲರ್ ವಹಿವಾಟು ದುರ್ಬಲಗೊಂಡಿದ್ದರಿಂದ ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 15 ಪೈಸೆ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ 48.64 ರೂ.ಗಳಿಗೆ ತಲುಪಿತ್ತು. ಇಂದು ಮತ್ತೆ 15 ಪೈಸೆ ಏರಿಕೆಯಾಗಿದ್ದರಿಂದ ಡಾಲರ್ ಎದುರಿಗೆ 48.79/80 ರೂಪಾಯಿಗಳಿಗೆ ತಲುಪಿದೆ. ದೇಶಿಯ ಶೇರುಪೇಟೆಯಲ್ಲಿ ಚೇತರಿಕೆ ಹಾಗೂ ಡಾಲರ್ಗಳ ದುರ್ಬಲ ವಹಿವಾಟಿನಿಂದಾಗಿ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ಡೀಲರ್ಗಳು ಅಭಿಪ್ರಾಯಪಟ್ಟಿದ್ದಾರೆ. |