ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
PTI
ಕಳೆದ ವಾರ ಜಪಾನ್‌ನ ಬುಲೆಟ್‌ ರೈಲಿನಲ್ಲಿ ಪ್ರಯಾಣಿಸಿ ಅನುಭವ ಪಡೆದು ಭಾರತಕ್ಕೆ ಮರಳಿದ ಕೇಂದ್ರ ರೈಲ್ವೆ ಖಾತೆ ಸಚಿವ ಲಾಲುಪ್ರಸಾದ್ ಯಾದವ್‌, ದೇಶದ ಕೆಲ ಭಾಗಗಳಲ್ಲಿ ಬುಲೆಟ್‌ ರೈಲುಗಳ ಸೌಲಭ್ಯ ಒದಗಿಸಲು ಜಾಗತಿಕ ಮಟ್ಟದ ಕಂಪೆನಿಗಳನ್ನು ನೇಮಕ ಮಾಡುವ ಸಿದ್ದತೆಯಲ್ಲಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ದೇಶದಲ್ಲಿ ಬುಲೆಟ್‌ ರೈಲುಗಳು ಸಂಚರಿಸುವ ದಿನಗಳು ತುಂಬಾ ದೂರವಿಲ್ಲ ಎಂದು ಸಚಿವ ಲಾಲು ಪ್ರಸಾದ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದೇಶದ ಕೆಲ ಭಾಗಗಳಲ್ಲಿ ಬುಲೆಟ್‌ ರೈಲುಗಳ ಸೌಲಭ್ಯ ಒದಗಿಸಲು ಜಾಗತಿಕ ಮಟ್ಟದ ಕಂಪೆನಿಗಳನ್ನು ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಮುಂಬೈ- ಅಹಮದಾಬಾದ್, ದೆಹಲಿ ಚಂಡೀಗಢ್ ಮತ್ತು ದೆಹಲಿ ಪಾಟ್ನಾ ಮಾರ್ಗದಲ್ಲಿ ಬುಲೆಟ್‌ ರೈಲುಗಳ ಸೌಲಭ್ಯ ಒದಗಿಸುವ ಸಾಧ್ಯತೆಗಳಿವೆ ಎಂದು ಸಚಿವ ಲಾಲು ಹೇಳಿದ್ದಾರೆ.

ಕಳೆದ ವಾರ ಜಪಾನ್‌ಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಟೋಕಿಯೊದಿಂದ ಕೊಯಾಟೊಗೆ ಪ್ರತಿ ಗಂಟೆಗೆ 300 ಕಿ.ಮಿ. ವೇಗದಲ್ಲಿ ಸಂಚರಿಸುವ ಬುಲೆಟ್‌ ರೈಲಿನಲ್ಲಿ ಪ್ರಯಾಣಿಸಿ ಅನುಭವ ಪಡೆದಿದ್ದರು.

ಬುಲೆಟ್‌ ರೈಲು ಅನುಭವದ ಬಗ್ಗೆ ಸುದ್ದಿಗಾರರು ಸಚಿವ ಲಾಲು ಪ್ರಸಾದ್ ಯಾದವ್ ಅವರನ್ನು ಕೇಳಿದಾಗ, ಅದೊಂದು ಅದ್ಭುತ ಅನುಭವ ಜಪಾನ್‌ನಲ್ಲಿ ಬುಲೆಟ್‌ ಟ್ರೆನ್‌ಗಳ ನಿರ್ವಹಣೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದು ಸಚಿವ ಲಾಲು ಶ್ಲಾಘಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ‌ನಿಂದ ಮೆಟಾಸ್‌ಗೆ ಹಣ ವರ್ಗಾವಣೆ:ಗುಪ್ತಾ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಾಹನ ಸಾಲ:ಎಚ್‌ಡಿಎಫ್‌ಸಿಯಿಂದ ಬಡ್ಡಿ ದರ ಕಡಿತ
ಜೆಟ್ ಒಪ್ಪಂದ ಜಾರಿಗೆ ಸಮಯ ಅಗತ್ಯ :ಮಲ್ಯ
ಐಟಿಯಲ್ಲಿ ಉದ್ಯೋಗವೇ ಬೇಡ..!