ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಾಜು ಜಾಮೀನು: ವಿಚಾರಣೆ ಜ.22ಕ್ಕೆ ಮುಂದೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜು ಜಾಮೀನು: ವಿಚಾರಣೆ ಜ.22ಕ್ಕೆ ಮುಂದೂಡಿಕೆ
PTI
ಕಳಂಕಿತ ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಾಲಿಂಗಾರಾಜು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜನೆವರಿ 22ರ ವರೆಗೆ ಮುಂದೂಡಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.ದೇಶದ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ, ರಾಜು ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುವುದನ್ನು ಕೂಡಾ ಜನೆವರಿ 22ಕ್ಕೆಮುಂದೂಡಲಾಗಿದೆ ಎನ್ನಲಾಗಿದೆ.

ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು, ಸಹೋದರ ರಾಮಾರಾಜು ಮತ್ತು ಸತ್ಯಂನ ಮಾಜಿ ಆರ್ಥಿಕ ವಿಭಾಗದ ಮುಖ್ಯಸ್ಥ ವಡ್ಲಾಮನಿ ಶ್ರೀನಿವಾಸ್ ಅವರ ಜಾಮೀನು ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಜನೆವರಿ 22ಕ್ಕೆ ಮುಂದೂಡಿದೆ.

ರಾಮಲಿಂಗಾರಾಜು ಎಸಗಿದ ಆರ್ಥಿಕ ವಂಚನೆಯಲ್ಲಿ ಸಹೋದರ ರಾಮಾರಾಜು ಹಾಗೂ ಸತ್ಯಂನ ಮಾಜಿ ಸಿಎಫ್‌ಒ ವಡ್ಲಾಮನಿ ಶ್ರೀನಿವಾಸ್ ಪರಸ್ಪರ ಸಹಕರಿಸಿದ್ದಾರೆ ಎಂದು ಅಪರಾಧ ಪತ್ತೆ ದಳ ಆರೋಪ ಹೊರಿಸಿದೆ. ಆದರೆ ತನಿಖೆಗೆ ಸಹಕಾರಿಯಾಗುವಂತಹ ಯಾವುದೇ ವಿಷಯಗಳು ಲಭ್ಯವಾಗಿಲ್ಲ ಎಂದು ಹೇಳಿದೆ.

ಸತ್ಯಂನ 7 ಸಾವಿರ ಕೋಟಿ ಹಗರಣದಲ್ಲಿ ಮೂವರು ಆರೋಪಿಗಳು ಭಾಗಿಯಾಗಿದ್ದು, ಚಂಚಲ್‌ಗುಡಾ ಕಾರಾಗ್ರಹದಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಲಯಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
ಸತ್ಯಂ‌ನಿಂದ ಮೆಟಾಸ್‌ಗೆ ಹಣ ವರ್ಗಾವಣೆ:ಗುಪ್ತಾ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಾಹನ ಸಾಲ:ಎಚ್‌ಡಿಎಫ್‌ಸಿಯಿಂದ ಬಡ್ಡಿ ದರ ಕಡಿತ
ಜೆಟ್ ಒಪ್ಪಂದ ಜಾರಿಗೆ ಸಮಯ ಅಗತ್ಯ :ಮಲ್ಯ