ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದರ ಇಳಿಕೆ: ಒಪೆಕ್‌ನಿಂದ ಉತ್ಪಾದನೆ ಕಡಿತ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ ಇಳಿಕೆ: ಒಪೆಕ್‌ನಿಂದ ಉತ್ಪಾದನೆ ಕಡಿತ ಸಾಧ್ಯತೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ನಿರಂತರ ಇಳಿಕೆಯಾದಲ್ಲಿ ಮಾರ್ಚ್ ಸಿಂಗಳಿನಲ್ಲಿ ವಿಯನ್ನಾದಲ್ಲಿ ನಡೆಯುವ ಒಪೆಕ್ ಸಭೆಯಲ್ಲಿ ಮತ್ತಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಒಪೆಕ್ ಅಧ್ಯಎಕ್ಷ ಚಾಕಿಬ್ ಖೇಲಿಲ್ ಹೇಳಿದ್ದಾರೆ.

ಮುಂಬರುವ ಮಾರ್ಚ್‌ ತಿಂಗಳವರೆಗೆ ತೈಲ ದರ ನಿರಂತರ ಇಳಿಕೆಯಾದಲ್ಲಿ ತೈಲ ದರ ಸ್ಥಿರತೆಗಾಗಿ ಉತ್ಪಾದನೆ ಕಡಿತಗೊಳಿಸುವ ನಿರ್ದಾರವನ್ನು ಒಪೆಕ್ ಸದಸ್ಯ ರಾಷ್ಟ್ರಗಳು ಬೆಂಬಲಿಸುತ್ತವೆ ಎನ್ನುವ ವಿಶ್ವಾಸವಿದೆ ಎಂದು ಖೇಲಿಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ

ಜಾಗತಿಕವಾಗಿ ತೈಲ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ರಫ್ತು ವಹಿವಾಟಿನಲ್ಲಿ ಇಳಿಕೆ ಕಂಡುಬಂದಿದ್ದು, 2009ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕೂಡಾ ತೈಲ ದರಗಳು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಸಚಿವ್ ಖೇಲಿಲ್ ಆತಂಕ ವ್ಯಕ್ತಪಡಿಸಿದ್ದಾರೆ.

ತೈಲ ಉತ್ಪಾದಕ ರಾಷ್ಟ್ರಗಳ ದರದ ಸ್ಥಿರತೆಯನ್ನು ಕಾಪಾಡಲು ತೈಲ ಉತ್ಪಾದನೆ ಕಡಿತವನ್ನು ಘೋಷಿಸಲಾಗಿದ್ದು, ಪ್ರತಿ ಬ್ಯಾರೆಲ್‌ಗೆ 45 ರಿಂದ 46 ಡಾಲರ್‌ ದರ ಸೂಕ್ತವಾಗಿದೆ ಎಂದು ಒಪೆಕ್ ಅಧ್ಯಕ್ಷ ಖೇಲಿಲ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜು ಜಾಮೀನು: ವಿಚಾರಣೆ ಜ.22ಕ್ಕೆ ಮುಂದೂಡಿಕೆ
ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
ಸತ್ಯಂ‌ನಿಂದ ಮೆಟಾಸ್‌ಗೆ ಹಣ ವರ್ಗಾವಣೆ:ಗುಪ್ತಾ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ
ವಾಹನ ಸಾಲ:ಎಚ್‌ಡಿಎಫ್‌ಸಿಯಿಂದ ಬಡ್ಡಿ ದರ ಕಡಿತ