ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಸಿಐಸಿಐನಿಂದ ಬಡ್ಡಿ ದರ ಕಡಿತ:ಕಾಮತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐನಿಂದ ಬಡ್ಡಿ ದರ ಕಡಿತ:ಕಾಮತ್
PTI
ದೇಶದಲ್ಲಿ ಪ್ರಮುಖ ಬ್ಯಾಂಕ್ ಐಸಿಐಸಿಐ, ಮುಂದಿನ 45 ದಿನಗಳಲ್ಲಿ ಬಡ್ಡಿ ದರ ಕಡಿತ ಘೋಷಿಸುವ ನಿರೀಕ್ಷೆಯಿದೆ ಎಂದು ಬ್ಯಾಂಕ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಕಾಮತ್ ಹೇಳಿದ್ದಾರೆ.

ಮುಂಬರುವ ಆರು ವಾರಗಳಲ್ಲಿ ಬಡ್ಡಿ ದರ ಕಡಿತವಾಗುವ ನಿರೀಕ್ಷೆಯಿದ್ದು, ಬ್ಯಾಂಕ್ ತನ್ನ ಅನುಕೂಲಕ್ಕೆ ತಕ್ಕಂತೆ ಬಡ್ಡಿ ದರ ಕಡಿತಗೊಳಿಸಲಿದೆ ಎಂದು ಕೆ.ವಿ. ಕಾಮತ್ ಸಿಐಐ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಹಲವು ಬ್ಯಾಂಕ್‌ಗಳು ಒಂದು ವರ್ಷದ ಠೇವಣಿಯ ಮೇಲೆ ಶೇ.2ರಷ್ಟು ಬಡ್ಡಿ ದರವನ್ನು ಕಡಿತಗೊಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‍‌ ಕೂಡಾ ವ್ಯಯಕ್ತಿಕ ಹಾಗೂ ವಾಣಿಜ್ಯ ವಾಹನಗಳ ಮೇಲಿನ ಬಡ್ಡಿ ದರವನ್ನು 150 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದೆ ಎಂದು ಕಾಮತ್ ತಿಳಿಸಿದರು.

ಕಾರ್ಪೋರೇಟ್ ಸಾಲ ಹಾಗೂ ಸಗಟು ಸಾಲಗಳ ಮೇಲೆ ಬಡ್ಡಿ ದರ ಕಡಿತ ಘೋಷಿಸಿರುವುದರಿಂದ ಬೃಹತ್, ಸಣ್ಣ ಮತ್ತು ಮಧ್ಯಮ ಕಂಪೆನಿಗಳಿಗೆ ಲಾಭವಾಗಲಿದೆ. ಐಸಿಐಸಿಐ ಬ್ಯಾಂಕ್ ಕೂಡಾ ಶೀಘ್ರದಲ್ಲಿ ಬಡ್ಡಿ ದರ ಕಡಿತ ಘೋಷಿಸಲಿದೆ ಎಂದು ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದರ ಇಳಿಕೆ: ಒಪೆಕ್‌ನಿಂದ ಉತ್ಪಾದನೆ ಕಡಿತ ಸಾಧ್ಯತೆ?
ರಾಜು ಜಾಮೀನು: ವಿಚಾರಣೆ ಜ.22ಕ್ಕೆ ಮುಂದೂಡಿಕೆ
ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
ಸತ್ಯಂ‌ನಿಂದ ಮೆಟಾಸ್‌ಗೆ ಹಣ ವರ್ಗಾವಣೆ:ಗುಪ್ತಾ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌
ಫಾರೆಕ್ಸ್ : ರೂಪಾಯಿ ಮೌಲ್ಯ ಬಲವರ್ಧನೆ