ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರ್ತಿಏರ್‌ಟೆಲ್‌ನಿಂದ ಐಪಿಟಿವಿ ಸೇವೆ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿಏರ್‌ಟೆಲ್‌ನಿಂದ ಐಪಿಟಿವಿ ಸೇವೆ ಆರಂಭ
ಭಾರ್ತಿಏರ್‌ಟೆಲ್ ಇಂದು ಇಂಟರ್‌ನೆಟ್‌ ಪ್ರೋಟೋಕಾಲ್ ಟೆಲಿವಿಜನ್ (ಐಪಿಟಿವಿ) ಸೇವೆಯನ್ನು ನಗರದಲ್ಲಿ ಆರಂಭಿಸಿದ್ದು,ದೇಶದ ಮೆಟ್ರೋ ನಗರಗಳಿಗೆ ಶೀಘ್ರದಲ್ಲಿ ವಿಸ್ತರಿಸುವ ಯೋಜನೆಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಬೆಂಗಳೂರು ಮತ್ತು ಮುಂಬೈ ಸೇರಿದಂತೆ ದೇಶದ 6 ರಿಂದ 8 ಮೆಟ್ರೋ ನಗರಗಳ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಭಾರ್ತಿ ಏರ್‌ಟೆಲ್ ಅಧ್ಯಕ್ಷ (ಟೆಲಿಮೀಡಿಯಾ)ಅತುಲ್ ಬಿಂದಾಲ್ ತಿಳಿಸಿದ್ದಾರೆ.

ಭಾರ್ತಿಏರ್‌ಟೆಲ್ ಐಪಿಟಿವಿ ಸೇವೆಗಾಗಿ ಅಮೆರಿಕ ಮೂಲದ ಯುಟಿ ಸ್ಟಾರ್‌ಕಾಂ ಕಂಪೆನಿಯೊಂದಿಗೆ ತಾಂತ್ರಿಕ ಪಾಲುದಾರಿಕೆಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಐಪಿಟಿವಿ ಸೇವೆಯನ್ನು ಆರಂಭಿಸುವುದರೊಂದಿಗೆ ಗ್ರಾಹಕರಿಗೆ ಟ್ರಿಪ್ಪಲ್ ಪೇ ಅಡ್ವಂಟೇಜ್ ನೀಡಿದಂತಾಗಿದ್ದು, ಕಂಪೆನಿಯ ಮೊಬೈಲ್, ಬ್ರಾಡ್‌ಬ್ಯಾಂಡ್‌ ಮತ್ತು ಇದೀಗ ಟೆಲಿವಿಜನ್ ಹಾಗೂ ವೀಡಿಯೋಗಳು ಬಹುಬೇಡಿಕೆಯಲ್ಲಿವೆ ಎಂದು ಬಿಂದಾಲ್ ಮಾಹಿತಿ ನೀಡಿದ್ದಾರೆ.

ಭಾರ್ತಿಏರ್‌ಟೆಲ್ ಕಂಪೆನಿ, ಗ್ರಾಹಕರಿಗಾಗಿ ಎರಡು ಯೋಜನೆಗಳನ್ನು ಪರಿಚಯಿಸಿದ್ದು ಮ್ಯಾಜಿಕ್ ಎಟ್‌ ಹೋಮ್‌ಪ್ಯಾಕ್‌(ಟ್ರಿಪಲ್‌ ಪೇ ಪ್ಲ್ಯಾನ್)ಅಡಿಯಲ್ಲಿ ಪ್ರತಿ ತಿಂಗಳಿಗೆ 999 ಪಾವತಿಸಬೇಕಾಗಿದ್ದು,135 ಚಾನೆಲ್‌ಗಳು ಬ್ರಾಡ್‌ಬ್ಯಾಂಡ್‌ ಮತ್ತು ಸ್ಥಿರ ದೂರವಾಣಿ ಸಂಪರ್ಕವನ್ನು ನೀಡಲಾಗುತ್ತದೆ. ಕೊಂಬೊ ಪ್ಯಾಕ್‌ನಲ್ಲಿ ಪ್ರತಿ ತಿಂಗಳು 599 ರೂಪಾಯಿ ಪಾವತಿಸಬೇಕಾಗಿದ್ದು,117 ಚಾನೆಲ್‌ಗಳು ಹಾಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನು ನೀಡಲಾಗುತ್ತಿದ್ದು, 2.5ಜಿಬಿ ವರೆಗೆ ಡೌನ್‌ಲೋಡ್ ಮಿತಿಯನ್ನು ಹೊಂದಿದೆ.

ಭಾರ್ತಿಏರ್‌ಟೆಲ್ ಐಪಿಟಿವಿ ಸೇವೆಯನ್ನು ಆರಂಭಿಸುವುದರೊಂದಿಗೆ ಹೆಚ್ಚಿನ ಬ್ರಾಡ್‌ಬ್ಯಾಂಡ್‌ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಭಾರ್ತಿ ಏರ್‌ಟೆಲ್ ಅಧ್ಯಕ್ಷ (ಟೆಲಿಮೀಡಿಯಾ)ಅತುಲ್ ಬಿಂದಾಲ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಸಿಐಸಿಐನಿಂದ ಬಡ್ಡಿ ದರ ಕಡಿತ:ಕಾಮತ್
ದರ ಇಳಿಕೆ: ಒಪೆಕ್‌ನಿಂದ ಉತ್ಪಾದನೆ ಕಡಿತ ಸಾಧ್ಯತೆ?
ರಾಜು ಜಾಮೀನು: ವಿಚಾರಣೆ ಜ.22ಕ್ಕೆ ಮುಂದೂಡಿಕೆ
ಶೀಘ್ರದಲ್ಲಿ ಬುಲೆಟ್‌ ರೈಲು ಸೌಲಭ್ಯ: ಲಾಲು
ಸತ್ಯಂ‌ನಿಂದ ಮೆಟಾಸ್‌ಗೆ ಹಣ ವರ್ಗಾವಣೆ:ಗುಪ್ತಾ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 36 ಡಾಲರ್‌