ಏಷ್ಯಾ ಶೇರುಪೇಟೆಗಳ ದುರ್ಬಲ ವಹಿವಾಟು ಹಾಗೂ ಕರೆನ್ಸಿ ಮೌಲ್ಯಗಳಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 23 ಪೈಸೆ ಕುಸಿತ ಕಂಡಿದೆ.ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ಗೆ 48.93 ರೂಪಾಯಿಗಳಿಗೆ ತಲುಪಿ ಮುಕ್ತಾಯಗೊಂಡಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 23 ಪೈಸೆ ಕುಸಿತವಾಗಿರುವುದರಿಂದ ಡಾಲರ್ಗೆ 48.70/71 ರೂಪಾಯಿಗಳಿಗೆ ತಲುಪಿದೆ. ಏಷ್ಯಾ ಮಾರುಕಟ್ಟೆಗಳ ಕುಸಿತವಾಗಿದ್ದರಿಂದ ದೇಶಿಯ ಶೇರುಪೇಟೆ ಕೂಡಾ ಕುಸಿಯುವ ಆತಂಕವನ್ನು ಸೃಷ್ಟಿಸಿತ್ತು. ಬಂಡವಾಳ ಹೂಡಿಕೆಯ ಹೊರಹರಿವು ಹೆಚ್ಚಳವಾಗುವ ಸಾಧ್ಯತೆಗಳಿಂದಾಗಿ, ಅಮುದುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಮೌಲ್ಯ ಕುಸಿದಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. |