ದೇಶದ ನಂಬರ್ ಒನ್ ಸಾಫ್ಟ್ವೇರ್ ರಫ್ತು ಕಂಪೆನಿ ಟಾಟಾ ಕನ್ಸಲ್ಟನ್ಸಿಗೆ, ಇಟಲಿ ಮೂಲದ ಡುಕಾಟಿ ಮೋಟಾರ್ ಹೋಲ್ಡಿಂಗ್ಸ್ ಕಂಪೆನಿಗೆ ತಾಂತ್ರಿಕ ಮೂಲದ ಸೇವೆಗಳನ್ನು ನೀಡಲು ಬಹುಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಟಿಸಿಎಸ್ ವಕ್ತಾರರು ತಿಳಿಸಿದ್ದಾರೆ.
ಮೊದಲ ಹಂತವಾಗಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಡುಕಾಟಿ ಕಂಪೆನಿಗೆ ಹಾಗೂ ಯುರೋಪ್ ರಾಷ್ಟ್ರಗಳಲ್ಲಿರುವ ಡುಕಾಟಿ ಗ್ರಾಹಕ ಕಂಪೆನಿಗಳಿಗೆ ಎಂಟರ್ಪ್ರೈಸ್ ರಿಸೋರ್ಸ್ ಪ್ಲ್ಯಾನಿಂಗ್(ಇಆರ್ಪಿ) ಸೇವೆಯನ್ನು ಒದಗಿಸಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟಿಸಿಎಸ್ ಕಂಪೆನಿಯ ತಾಂತ್ರಿಕ ಪಾಲುದಾರಿಕೆಯಿಂದಾಗಿ ಡುಕಾಟಿ ಕಂಪೆನಿಗೆ, ಗ್ರಾಹಕರಿಗೆ ಉದ್ಯಮ ಪರಿಸರ ಹೆಚ್ಚಿಸಿ ಸಹಾಯ ನೀಡಲು ಮತ್ತು ಟಿಸಿಎಸ್ ಕಂಪೆನಿಯ ಪ್ರತಿಭೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಂಪೆನಿಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳವಲ್ಲಿ ನೆರವಾಗುತ್ತದೆ ಎಂದು ಟಿಸಿಎಸ್ ಕಂಪೆನಿಯ ವ್ಯವಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ರಾಮಾದೊರೈ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |