ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದಿಂದಾಗಿ 'ಯುಕೆ' ಆರ್ಥಿಕ ಕುಸಿತದಿಂದ ಪಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಿಂದಾಗಿ 'ಯುಕೆ' ಆರ್ಥಿಕ ಕುಸಿತದಿಂದ ಪಾರು
ಚೀನಾ ,ಭಾರತದಂತಹ ಉದಯೋನ್ಮುಖ ರಾಷ್ಟ್ರಗಳಿಂದ ರಫ್ತು ಬೇಡಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬ್ರಿಟನ್ ಜಾಗತಿಕ ಆರ್ಥಿಕ ಕುಸಿತದಿಂದ ಪಾರಾಗಲಿದೆ ಎಂದು ಖ್ಯಾತ ಆರ್ಥಿಕ ತಜ್ಞ ಪ್ರೋಫೆಸರ್ ಡೇವಿಡ್ ಗ್ರೀನ್‌ವೇ ಅಭಿಪ್ರಾಯಪಟ್ಟಿದ್ದಾರೆ.

ಜಗತ್ತು ವಿಚಿತ್ರವಾದ ಅಸಾಮಾನ್ಯ ಪರಿಸ್ಥಿತಿಯತ್ತ ಸಾಗುತ್ತಿದೆ. ದೇಶದಲ್ಲಿ ಆರ್ಥಿಕ ಕುಸಿತ ಎದುರಾದರೂ ನೋವುರಹಿತವಾಗಿರುತ್ತದೆ ಎಂದು ನಾಟಿಂಗ್‌ಹ್ಯಾಂ ವಿಶ್ವವಿದ್ಯಾಲಯದ ಉಪಕುಲಪತಿ ಗ್ರೀನ್‌ವೇ ಹೇಳಿದ್ದಾರೆ.

ಸರಕಾರ ಜಾಗತಿಕ ಆರ್ಥಿಕ ಕುಸಿತವನ್ನು ತಡೆಯಲು ತೆರಿಗೆ ಹಣವನ್ನು ಅಡಳಿತ ವ್ಯವಸ್ಥೆಯಲ್ಲಿ ವೀಲಿನಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ತೆರಿಗೆ ಪಾವತಿ ಹಾಗೂ ಕಡಿಮೆ ಸಾರ್ವಜನಿಕ ವೆಚ್ಚದಂತಹ ಸಂದರ್ಭಗಳು ಎದುರಾಗಬಹುದು ಎನ್ನುವ ಭ್ರಮೆಯ ಲ್ಲಿರಬಾರದು. ಚೀನಾ , ಭಾರತದಂತಹ ದೇಶಗಳಿಂದ ಉತ್ತೇಜನ ಪಡೆಯಬಹುದಾಗಿದೆ. ಉಭಯ ದೇಶಗಳು ನಿರಂತರ ಅಭಿವೃದ್ದಿ ಹೊಂದುತ್ತಿವೆ ಎಂದು ಗ್ರೀನ್‌ವೇ ತಿಳಿಸಿದ್ದಾರೆ.

ವಿಶೇಷವಾಗಿ ಚೀನಾ ಸರಕಾರ ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳನ್ನು ತಡೆಯಲು ಬಹುಮಿಲಿಯನ್ ಡಾಲರ್‌ ಉತ್ತೇಜನ ಪ್ಯಾಕೇಜ್‌ ಘೋಷಿಸಿದೆ. ಇಂಗ್ಲೆಂಡ್ ಕರೆನ್ಸಿ ಸ್ಟೆರ್ಲಿಂಗ್‌ ಅಪಮೌಲ್ಯವಾದಲ್ಲಿ ವಹಿವಾಟಿನಲ್ಲಿ ಸಹಾಯಕವಾಗುತ್ತದೆ. ಆರ್ಥಿಕ ಕುಸಿತದ ಸಂದರ್ಭದಲ್ಲಿ ಬೇಡಿಕೆಯನ್ನು ಹೆಚ್ಚಿಸುವಂತೆ ಸರಕಾರಕ್ಕೆ ವಿಶೇಷವಾಗಿ ಮನವಿ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದೆರಡು ವರ್ಷಗಳ ಧೀರ್ಘಾವಧಿಯವರೆಗೆ ಗ್ರಾಹಕರನ್ನು ನಂಬುವಂತಿಲ್ಲ. ನಮ್ಮ ರಫ್ತು ವಹಿವಾಟಿನ ಮೇಲೆ ಹೆಚ್ಚಿನ ನಂಬಿಕೆಯಿಡಬಹುದಾಗಿದೆ. ಸ್ಟೆರ್ಲಿಂಗ್‌ ಅಪಮೌಲ್ಯದಿಂದಾಗಿ ಅಲ್ಪ ಕಾಲ ರಾಷ್ಟ್ರೀಯತೆಯ ವ್ಯೆಫಲ್ಯತೆಯನ್ನು ಕಾಣಬಹುದು. ಆದರೆ ಅದು ಸಹಕಾರಿಯಾಗಿರುತ್ತದೆ ಎಂದು ಖ್ಯಾತ ಆರ್ಥಿಕ ತಜ್ಞ ಪ್ರೋಫೆಸರ್ ಡೇವಿಡ್ ಗ್ರೀನ್‌ವೇ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಭಯ ಮೆತಾಸ್‌ ಕಂಪೆನಿಗಳ ತನಿಖೆಗೆ ಆದೇಶ
ಟಿಸಿಎಸ್‌‌ಗೆ ಡುಕಾಟಿಯಿಂದ ಭಾರಿ ಮೌಲ್ಯದ ಗುತ್ತಿಗೆ
ಫಾರೆಕ್ಸ್‌: ರೂಪಾಯಿ ಮೌಲ್ಯ ಕುಸಿತ
ರಾಜು ಉನ್ನತಿಗೆ ನಾನು ಹೊಣೆಯಲ್ಲ :ರೆಡ್ಡಿ
ಬೇಡಿಕೆ ಪೂರೈಕೆಗೆ ಮತ್ತಷ್ಟು ಪ್ಯಾಕೇಜ್: ಕಮಲ್‌ನಾಥ್
ರಾಜು ಶ್ರೇಯಸ್ಸಿಗೆ ಕಾರಣ ನಾನಲ್ಲ: ರೆಡ್ಡಿ