ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಿತ್ತಲ್ ನಿವಾಸಗಳ ಮೌಲ್ಯ ಅರ್ಧದಷ್ಟು ಕುಸಿತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿತ್ತಲ್ ನಿವಾಸಗಳ ಮೌಲ್ಯ ಅರ್ಧದಷ್ಟು ಕುಸಿತ!
ಭಾರತೀಯ ಮೂಲದ ಖ್ಯಾತ ಉದ್ಯಮಿ ಲಕ್ಷ್ಮಿ ಮಿತ್ತಲ್‌ಗೆ ಶನಿದೆಸೆ ಆರಂಭವಾದಂತಾಗಿದೆ. ಶೇರುಪೇಟೆಯಲ್ಲಿ ನಿವ್ವಳ ಸಂಪತ್ತಿನಲ್ಲಿ ಒಂದು ಮೂರಂಶದಷ್ಟು ನಷ್ಟ ಅನುಭವಿಸಿದ ಮಿತ್ತಲ್, ಲಂಡನ್‌ನ ಪ್ರತಿಷ್ಠಿತ ಬಡಾವಣೆಯಲ್ಲಿ ಖರೀದಿಸಿದ ಮೂರು ಮನೆಗಳ ದರಗಳು ಕೂಡಾ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ.

ಪ್ರಾಪರ್ಟಿ ವೆಬ್‌ಸೈಟ್‌ ಕಳೆದ ವರ್ಷ ಜುಲೈ ತಿಂಗಳಲ್ಲಿ ವರದಿ ಮಾಡಿದ ಪ್ರಕಾರ ಬ್ರಿಟನ್‌ನ 20 ಶ್ರೀಮಂತ ಬಡವಾಣೆಗಳಲ್ಲಿ ಸ್ಥಾನಪಡೆದ ನಗರದ ಕೆನ್ಸಿಂಗ್ಟನ್‌ ಪ್ಯಾಲೇಸ್ ಗಾರ್ಡನ್‌ನಲ್ಲಿ ಮಿತ್ತಲ್ ಕುಟುಂಬ ಮೂರು ಮನೆಗಳನ್ನು ಖರೀದಿಸಿತ್ತು.

ಕೆನ್ಸಿಂಗ್ಟನ್‌ ಪ್ಯಾಲೇಸ್ ಗಾರ್ಡನ್‌ನಲ್ಲಿ ಮಿತ್ತಲ್ ಕುಟುಂಬ ಖರೀದಿಸಿದ ಮೂರು ಮನೆಗಳ ಬೆಲೆ ಖರೀದಿಸಿದ ಸಂದರ್ಭದಲ್ಲಿ 41.4 ಮಿಲಿಯನ್ ಪೌಂಡ್‌ಗಳಾಗಿತ್ತು. ಆದರೆ ಪ್ರಸ್ತುತ ಮನೆಗಳ ಖರೀದಿ ದರ 23.5 ಮಿಲಿಯನ್ ಪೌಂಡ್‌ಗಳಿಗೆ ಇಳಿಕೆಯಾಗಿದ್ದರೂ ಕೆನ್ಸಿಂಗ್ಟನ್‌ ಸ್ಟ್ರೀಟ್‌ ಬ್ರಿಟನ್‌ನಲ್ಲಿ ಅತ್ಯಧಿಕ ಬೆಲೆಬಾಳುವ ಪ್ರದೇಶವಾಗಿದೆ ಎಂದು ಪ್ರಾಪರ್ಟಿ ವೆಬ್‌ಸೈಟ್ ಝೂಪ್ಲಾ ವರದಿ ಮಾಡಿದೆ.

ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ ಮಿತ್ತಲ್, ಮಗಳು ವನಿಶಾ ವಾಸಕ್ಕಾಗಿ 70 ಮಿಲಿಯನ್ ಪೌಂಡ್‌ ನೀಡಿ ಮನೆಯನ್ನು ಖರೀದಿಸಿದ್ದು, ಮನೆಯ ಸುತ್ತಲಿನ ಪ್ರದೇಶದಲ್ಲಿ ಪ್ರತಿಷ್ಠಿತ ವಿದೇಶಿ ರಾಯಭಾರಿ ಕಚೇರಿಗಳು ಹಾಗೂ ಸಾಲು ಸಾಲು ಮರಗಳಿಂದಾಗಿ ಆಕರ್ಷಕವಾಗಿದೆ.

ಮಿತ್ತಲ್ ನಂತರ ಮಗ ಆದಿತ್ಯನಿಗಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಜಾಗತಿಕ ದಾಖಲೆಯ ಮೊತ್ತವಾದ 117 ಮಿಲಿಯನ್ ಪೌಂಡ್‌ಗಳಿಗೆ ಮನೆಯನ್ನು ಖರೀದಿಸಿದ್ದರು. ಆರಂಭದಲ್ಲಿ ಬಿಲಿಯನರ್ಸ್‌ ಬಡಾವಣೆಯಲ್ಲಿ 57 ಮಿಲಿಯನ್ ಪೌಂಡ್‌ಗಳನ್ನು ನೀಡಿ ಮತ್ತೊಂದು ಮನೆಯನ್ನು ಮಿತ್ತಲ್ ಖರೀದಿಸಿದ್ದರು.

ನಾಲ್ಕು ವರ್ಷಗಳ ಹಿಂದೆ ಆಸ್ತಿಯ ಮೌಲ್ಯ 240 ಮಿಲಿಯನ್ ಪೌಂಡ್‌ಗಳಾಗಿತ್ತು. ಮಿತ್ತಲ್ ಕುಟುಂಬ ವಾಸಕ್ಕಾಗಿ ಮನೆಗಳನ್ನು ಖರೀದಿಸಿದ ಸಂದರ್ಭದಲ್ಲಿ ಒಟ್ಟು ಆಸ್ತಿಯ ಮೌಲ್ಯ 440 ಮಿಲಿಯನ್ ಪೌಂಡ್‌ಗಳಿಗೆ ಏರಿಕೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಆದರೆ ಮಿತ್ತಲ್ ಕುಟುಂಬ ವಾಸಿಸುವ ನಿವಾಸಗಳ ನಿಖರವಾದ ಮೌಲ್ಯ ತಿಳಿದುಬಂದಿಲ್ಲ. ಆದರೆ ಕಳೆದ ಆರು ತಿಂಗಳಿನಲ್ಲಿ ಬಡವಾಣೆಯಲ್ಲಿರುವ ನಿವಾಸಗಳ ಖರೀದಿ ದರಗಳಲ್ಲಿ ಅರ್ಧದಷ್ಟು ಇಳಿಕೆಯಾಗಿದೆ ಎಂದು ಝೂಪ್ಲಾ ವೆಬ್‌ಸೈಟ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಿಂದಾಗಿ 'ಯುಕೆ' ಆರ್ಥಿಕ ಕುಸಿತದಿಂದ ಪಾರು
ಉಭಯ ಮೇತಾಸ್‌ ಕಂಪೆನಿಗಳ ತನಿಖೆಗೆ ಆದೇಶ
ಟಿಸಿಎಸ್‌‌ಗೆ ಡುಕಾಟಿಯಿಂದ ಭಾರಿ ಮೌಲ್ಯದ ಗುತ್ತಿಗೆ
ಫಾರೆಕ್ಸ್‌: ರೂಪಾಯಿ ಮೌಲ್ಯ ಕುಸಿತ
ರಾಜು ಉನ್ನತಿಗೆ ನಾನು ಹೊಣೆಯಲ್ಲ :ರೆಡ್ಡಿ
ಬೇಡಿಕೆ ಪೂರೈಕೆಗೆ ಮತ್ತಷ್ಟು ಪ್ಯಾಕೇಜ್: ಕಮಲ್‌ನಾಥ್