ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
PTI
ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಮೇಲಾಗಿರುವ ಪರಿಣಾಮಗಳು ವರ್ಷಾಂತ್ಯಕ್ಕೆ ತೆರೆಗೆ ಸರಿಯುವ ಸಾಧ್ಯತೆಗಳಿವೆ ದೇಶದ ಅರ್ಧದಷ್ಟು ಜನತೆಗೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಯಾವುದೇ ಪರಿಣಾಮ ಬೀರಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

2009ರ ವರ್ಷಾಂತ್ಯಕ್ಕೆ ಜಾಗತಿಕ ಆರ್ಥಿಕ ಕುಸಿತ ನಿಧಾನವಾಗಿ ಮರೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾದಲ್ಲಿ ದೇಶದ ಅಭಿವೃದ್ಧಿ ದರ ಶೇ.8 ರಿಂದ ಶೇ.9 ಕ್ಕೆ ಏರಿಕೆ ಕಾಣಲಿದೆ ಎಂದು ರಿಸರ್ಚ್ ಆಂಡ್ ಅನಲಾಯಿಸಿಸ್ ವಿಂಗ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೊಂಟೆಕ್ ಮಾತನಾಡುತ್ತಿದ್ದರು.

ದೇಶದ ಶೇ.50 ರಿಂದ 60 ರಷ್ಟು ಜನತೆ ಕೃಷಿಯನ್ನು ಅವಲಂಬಿಸಿದ್ದು, ಕೃಷಿಕರ ಮೇಲೆ ಜಾಗತಿಕ ಆರ್ಥಿಕ ಕುಸಿತದ ಪರಿಣಾಮವಾಗಿಲ್ಲ. ಉಳಿದ ಶೇ.50 ರಷ್ಟು ಜನತೆಯ ಮೇಲೆ ಪರಿಣಾಮವಾಗಿದ್ದರೂ ಅದು ಅಲ್ಪ ಪ್ರಮಾಣದಲ್ಲಿದೆ ಎಂದು ಮೊಂಟಕ್ ಅಭಿಪ್ರಾಯಪಟ್ಟರು.

ಕಳೆದ ನಾಲ್ಕು ವರ್ಷಗಳ ಹಿಂದೆ ಶೇ.2 ರಷ್ಟಿದ್ದ ಕೃಷಿ ಅಭಿವೃದ್ಧಿ ದರ ಶೇ.3.6ಕ್ಕೆ ಏರಿಕೆಯಾಗಿದೆ.ಜಾಗತಿಕ ಆರ್ಥಿಕ ಕುಸಿತ ಗ್ರಾಮೀಣ ಭಾಗಗಳಲ್ಲಿ ಪ್ರಬಾವ ಬೀರಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'
ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಅಪರೇಟರ್
ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ
ಸತ್ಯಂ ಖರೀದಿಗೆ ಎಲ್‌ ಆಂಡ್ ಟಿ ಸಿದ್ದತೆ
ಸತ್ಯಂಗೆ ನೀಡಿದ ಎಸ್‌ಇಝಡ್ ಭೂಮಿ ರದ್ದು
ಮಿತ್ತಲ್ ನಿವಾಸಗಳ ಮೌಲ್ಯ ಅರ್ಧದಷ್ಟು ಕುಸಿತ!