ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
PTI
ದೇಶದ ಮೂರನೇ ಸಾಫ್ಟ್‌ವೇರ್ ರಫ್ತು ಕಂಪೆನಿಯಾದ ವಿಪ್ರೋ, ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, 2008 ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ 1,003.9 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 2007-08ರ ಆರ್ಥಿಕ ಸಾಲಿನ ತ್ರೈಮಾಸಿಕ ಅವಧಿಯಲ್ಲಿ 854 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದ್ದು,2008-09 ರ ಸಾಲಿನ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಶೇ.18 ರಷ್ಟು ಏರಿಕೆ ಕಂಡಿದೆ ಎಂದು ವಿಪ್ರೋ ಮೂಲಗಳು ತಿಳಿಸಿವೆ.

2008ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ, ಮಾಹಿತಿ ತಂತ್ರಜ್ಞಾನ ರಫ್ತು ಸೇವೆಯಲ್ಲಿ ದೇಶಿಯ ಕರೆನ್ಸಿ ರೂಪಾಯಿ ಸ್ಥಿರತೆಯಿಂದಾಗಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ನಾಲ್ಕು ಬೃಹತ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರಸಕ್ತ ತ್ರೈಮಾಸಿಕದಲ್ಲಿ 31 ನೂತನ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಆದಾಯ 6,773 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 5,433.2ಕೋಟಿ ರೂ.ಗಳಾಗಿತ್ತು ಎಂದು ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಪ್ರಸಕ್ತ ಆರ್ಥಿಕ ಸ್ಥಿತಿಯ ಕುರಿತ ಮಾತನಾಡಿದ ವಿಪ್ರೋ ಅದ್ಯಕ್ಷ ಅಜೀಂ ಪ್ರೇಮ್‌ಜಿ, ನಾವು ಕಠಿಣ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆರ್ಥಿಕ ಕುಸಿತದಿಂದಾಗಿ ವಹಿವಾಟಿನ ಕ್ಷೇತ್ರಗಳು ಬೃಹತ್ ಸವಾಲನ್ನು ಎದುರಿಸುತ್ತಿವೆ. ಆರ್ಥಿಕ ಕುಸಿತ ಅಂತ್ಯವಾಗುವಂತಹದಲ್ಲ. ಆದರೆ ಕಂಪೆನಿಗಳು ಚೇತರಿಸಿಕೊಳ್ಳಬೇಕಾಗಿದೆ ಎಂದು ಅಜೀಂ ಅಭಿಪ್ರಾಯಪಟ್ಟರು.

ಮುಂಬರುವ 2009ರ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಸಿಟಿ ಟೆಕ್ನಾಲಾಜೀಸ್ ಸೇರಿದಂತೆ ವಿಪ್ರೋ ಕಂಪೆನಿ, ಮಾಹಿತಿ ತಂತ್ರಜ್ಞಾನ ರಫ್ತು ಸೇವಾ ಕ್ಷೇತ್ರದಲ್ಲಿ 1,045 ಮಿಲಿಯನ್ ಡಾಲರ್ ಆದಾಯದ ಗುರಿಯನ್ನು ತಲುಪುವ ನಿರೀಕ್ಷೆ ಹೊಂದಲಾಗಿದೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'
ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಅಪರೇಟರ್
ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ
ಸತ್ಯಂ ಖರೀದಿಗೆ ಎಲ್‌ ಆಂಡ್ ಟಿ ಸಿದ್ದತೆ
ಸತ್ಯಂಗೆ ನೀಡಿದ ಎಸ್‌ಇಝಡ್ ಭೂಮಿ ರದ್ದು