ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
PTI
ಜಾಗತಿಕ ಆರ್ಥಿಕತೆಗೆ ಸಹಾಯಕವಾಗುವ ಮುಕ್ತ ವ್ಯಾಪಾರ ಒಪ್ಪಂದ ಕುರಿತಂತೆ ದೋಹಾ ಸಂಧಾನಕ್ಕೆ ಚಾಲನೆ ನೀಡಲು ದಾವೋಸ್‌ನಲ್ಲಿ ಜನೆವರಿ 31 ರಂದು ವಾಣಿಜ್ಯ ಸಚಿವರ ಸಭೆ ನಡೆಯಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸ್ವಿಟ್ಜರ್‌ಲ್ಯಾಂಡ್‌ನ ಸ್ಕಿಯಿಂಗ್ ರಿಸಾರ್ಟ್‌ನಲ್ಲಿ ವರ್ಲ್ಡ್‌ ಎಕಾನಾಮಿಕ್ ಫೋರಂ ವಾರ್ಷಿಕ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ, ಬ್ರೆಜಿಲ್, ಅಮೆರಿಕ ಮತ್ತು ಯುರೋಪಿಯನ್ ರಾಷ್ಟಗಳು ದಾವೋಸ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ದೋಹಾ ಮಾತುಕತೆಗಳನ್ನು ಮರಳಿ ಸುವ್ಯವಸ್ಥೆಗೆ ತರಲು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾತ್ ಮತ್ತು ಬ್ರಿಟನ್ ವಾಣಿಜ್ಯ ಸಚಿವ ಪೀಟರ್ ಮಂಡೆಲ್ಸನ್‌ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರಿಟನ್ ವಾಣಿಜ್ಯ ಸಚಿವ ಮಂಡೆಲ್ಸನ್‌ ಅವರೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್, ನಿಗದಿತ ಅವಧಿಯೊಳಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಪ್ರಸಕ್ತ ವರ್ಷಾಂತ್ಯದ ವೇಳೆಗೆ ದೋಹಾ ಮಾತುಕತೆಗಳು ಅಂತಿಮ ಹಂತಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'
ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಅಪರೇಟರ್
ಆರ್ಥಿಕ ಬಿಕ್ಕಟ್ಟು: ಚೀನಾದಲ್ಲಿ 550,000 ಉದ್ಯೋಗಿಗಳ ವಜಾ
ಸತ್ಯಂ ಖರೀದಿಗೆ ಎಲ್‌ ಆಂಡ್ ಟಿ ಸಿದ್ದತೆ