ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
PTI
ದೇಶದ ಪ್ರಮುಖ ಕಾರ್ಪೋರೇಟ್‌ ಕಂಪೆನಿಗಳಾದ ಎಸ್ಸಾರ್‌ ಮತ್ತು ಎಲ್‌ ಆಂಡ್ ಟಿ ಕಂಪೆನಿಗಳು, ಕಳಂಕಿತ ಸತ್ಯಂ ಐಟಿ ಕಂಪೆನಿಯನ್ನು ಖರೀದಿಸುವ ಆಸಕ್ತಿ ತೋರಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಸತ್ಯಂ ಶೇರು ದರಗಳಲ್ಲಿ ಶೇ.9 ರಷ್ಟು ಏರಿಕೆಯಾಗಿದೆ.

ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರು ಮಾಧ್ಯಮಗಳೊಂದಿಗೆ ಮಾತನಾಡಿ, ದೇಶ ವಿದೇಶಗಳ ಕಂಪೆನಿಗಳು ಸತ್ಯಂ ಐಟಿ ಕಂಪೆನಿಯನ್ನು ಖರೀದಿಸುವ ಆಸಕ್ತಿಯನ್ನು ತೋರಿಸಿವೆ ಎಂದು ನಿನ್ನೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಬುಧವಾರದ ಶೇರುಪೇಟೆ ಆರಂಭವಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಸತ್ಯಂ ಶೇರುದರಗಳಲ್ಲಿ ಶೇ.8.56 ರಷ್ಟು ಏರಿಕೆಯಾಗಿವೆ.

ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ ಶೇ.8.75ರಷ್ಟು ಏರಿಕೆಯಾಗಿ ಮುಖಬೆಲೆಯ ಶೇರು ದರ 29.20 ರೂಪಾಯಿಗಳಿಗೆ ತಲುಪಿದೆ. ಸುಮಾರು ಮೂರು ಕೋಟಿ ಸತ್ಯಂ ಶೇರುಗಳ ವಹಿವಾಟು ನಡೆದಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ಸತ್ಯಂ ಐಟಿ ಕಂಪೆನಿಯನ್ನು ಸುವ್ಯವಸ್ಥೆಗೆ ತರಲು ಸರಕಾರ ಮಧ್ಯಸ್ಥಿಕೆ ವಹಿಸಿರುವುದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಭಾವಿಸಿದ ಹೂಡಿಕೆದಾರರು ಸತ್ಯಂ ಶೇರುಗಳ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್
ವಿಜಯ ಬ್ಯಾಂಕ್‌ಗೆ 'ನಬಾರ್ಡ್ ಪ್ರಶಸ್ತಿ'
ಮೊಬೈಲ್ ವರ್ಚುವಲ್ ನೆಟ್‌ವರ್ಕ್ ಅಪರೇಟರ್