ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕತೆ , ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ:ಸತ್ಯಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕತೆ , ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ:ಸತ್ಯಂ
PTI
ಸತ್ಯಂ ವಂಚನೆ ಹಗರಣ ಹೊರಬಂದ ಎರಡು ವಾರಗಳ ನಂತರ ನೂತನ ನಿರ್ದೇಶಕ ಮಂಡಳಿಯ ಸದಸ್ಯ ದೀಪಕ ಪಾರೇಖ್ ಮಾತನಾಡಿ, ಆರ್ಥಿಕ ಸುವ್ಯವಸ್ಥೆ ಹಾಗೂ ದೇಶ ವಿದೇಶಗಳಲ್ಲಿರುವ ಗ್ರಾಹಕರ ಮನವೊಲಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಸತ್ಯಂನ ನೂತನ ನಿರ್ದೇಶಕ ಮಂಡಳಿ, ವಹಿವಾಟನ್ನು ಮುಂದುವರಿಸಲು ಅಗತ್ಯವಾಗಿರುವ ಆರ್ಥಿಕ ನೆರವನ್ನು ಪಡೆಯಲು ಬ್ಯಾಂಕ್‌ಗಳೊಂದಿಗೆ, ಹೂಡಿಕೆದಾರ ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಪಾರೇಖ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾವು ಆರ್ಥಿಕ ಸಹಾಯವನ್ನು ಪಡೆಯಲು ನಿರ್ಧರಿಸಿದ್ದೇವೆ. ಆದರೆ ಕಂಪೆನಿಯ ಆರ್ಥಿಕ ವಹಿವಾಟಿನ ಪರಿಶೀಲನೆಯ ನಂತರ ಉಳಿದ ಮೊತ್ತವನ್ನು ಆಧರಿಸಿ ಬ್ಯಾಂಕ್‌ಗಳು ಸಾಲ ನೀಡಲು ಸಿದ್ದವಾಗಿವೆ ಎಂದು ತಿಳಿಸಿದ್ದಾರೆ.

ಸತ್ಯಂ ನೂತನ ನಿರ್ದೇಶಕ ಮಂಡಳಿ ಜನೆವರಿ 22 ರಂದು ಸಭೆ ಸೇರಲಿದ್ದು, ಸಭೆಯಲ್ಲಿ ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕ ಹಾಗೂ ಕಂಪೆನಿಗೆ ಅಗತ್ಯವಾದ ಆರ್ಥಿಕ ಕ್ರೂಢಿಕರಣ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವ ಸತ್ಯಂ ಕಂಪ್ಯೂಟರ್‌ನ ನಿರ್ದೇಶಕ ಮಂಡಳಿ, ದೇಶ ವಿದೇಶಗಳ ಗ್ರಾಹಕರ ಮನವೊಲಿಸಲು ಪ್ರಯತ್ನಿಸುತ್ತಿದೆ. ಆದರೆ ಒಪ್ಪಂದವನ್ನು ಮುಂದುವರಿಸುವ ಬಗ್ಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪಾರೇಖ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ :ರೂಪಾಯಿ ಮೌಲ್ಯ ಬಲವರ್ಧನೆ
ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ
ದೋಹಾ ಮಾತುಕತೆ: ದಾವೋಸ್‌ನಲ್ಲಿ ವಾಣಿಜ್ಯ ಸಚಿವರ ಸಭೆ
3ನೇ ತ್ರೈಮಾಸಿಕದಲ್ಲಿ 1003.9 ಕೋಟಿ ಲಾಭ: ವಿಪ್ರೋ
ಆರ್ಥಿಕ ಬಿಕ್ಕಟ್ಟು ವರ್ಷಾಂತ್ಯಕ್ಕೆ ಅಂತ್ಯ:ಮೊಂಟೆಕ್