ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೀ ಎಂಟರ್‌ಟೇನ್‌ಮೆಂಟ್‌‌ ನಿವ್ವಳ ಲಾಭದಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೀ ಎಂಟರ್‌ಟೇನ್‌ಮೆಂಟ್‌‌ ನಿವ್ವಳ ಲಾಭದಲ್ಲಿ ಕುಸಿತ
ಸುಭಾಷ್ ಚಂದ್ರ್ ನೇತೃತ್ವದ ಜೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸೆಸ್ ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕದಲ್ಲಿ ಶೇ.26 ರಷ್ಟು ಇಳಿಕೆಯಾಗಿ ನಿವ್ವಳ ಆದಾಯ 84 ಕೋಟಿ ರೂ.ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

2007-08ರ ಆರ್ಥಿಕ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ 113.5 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿತ್ತು ಎಂದು ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಮೂರನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ಒಟ್ಟು ಆದಾಯ 545.6 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ 518.2 ಕೋಟಿ ರೂ. ಆದಾಯವಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತ ಎಂಟರ್‌ಟೇನ್‌ಮೆಂಟ್‌ ಮತ್ತು ಮಾಧ್ಯಮಗಳ ಉದ್ಯಮಕ್ಕೂ ಹರಡುತ್ತಿದೆ ಎಂದು ಜೀ ಮುಖ್ಯಸ್ಥ ಸುಭಾಷ್ ಚಂದ್ರ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಶೇರುಪೇಟೆಯ ಬಿಎಸ್‌ಇ ಮಾರುಕಟ್ಟೆಯಲ್ಲಿ ಝೀ ಎಂಟರ್‌ಟೇನ್‌ಮೆಂಟ್ ಶೇರುಗಳ ಮುಖಬೆಲೆಯಲ್ಲಿ ಶೇ.9.35 ರಷ್ಟು ಇಳಿಕೆಯಾಗಿ 110.05 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕಾರಕ್ಕೆ ಸತ್ಯಂ ಮಾರಾಟದ ಉದ್ದೇಶವಿಲ್ಲ:ಗುಪ್ತಾ
ಮುಂದಿನ ವರ್ಷದಲ್ಲಿ ಪ್ಯಾಕೇಜ್‌ ಘೋಷಣೆಯಿಲ್ಲ
ಆರ್ಥಿಕತೆ , ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ:ಸತ್ಯಂ
ಫಾರೆಕ್ಸ್ :ರೂಪಾಯಿ ಮೌಲ್ಯ ಬಲವರ್ಧನೆ
ಖರೀದಿ ನಿರೀಕ್ಷೆ: ಸತ್ಯಂ ಶೇರು ದರ ಏರಿಕೆ
ಟಾಟಾ ಇಂಡಿಕಾಂ‌ನಿಂದ 'ಮಂಡಿಭಾವ್‌' ಸೇವೆ