ದೇಶಿಯ ಶೇರುಪೇಟೆಯ ಚೇತರಿಕೆಯ ನಿರೀಕ್ಷೆಯಲ್ಲಿ ರಫ್ತು ವಹಿವಾಟುದಾರರು ಹಾಗೂ ಬ್ಯಾಂಕ್ಗಳು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 21 ಪೈಸೆ ಚೇತರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಡಾಲರ್ಗೆ 48.90ರೂಪಾಯಿಗಳಿಗೆ ತಲುಪಿತ್ತು. ಇಂಧಿನ ಆರಂಭಿಕ ವಹಿವಾಟಿನಲ್ಲಿ 21 ಪೈಸೆ ಏರಿಕೆಯಾಗಿ 49.11/12 ರೂಪಾಯಿಗಳಿಗೆ ತಲುಪಿದೆ. ಏಷ್ಯಾ ಮಾರುಕಟ್ಟೆಯಗಳ ಚೇತರಿಕೆಯಿಂದಾಗಿ ದೇಶಿಯ ಶೇರುಪೇಟೆ ಕೂಡಾ ಏರಿಕೆ ಕಾಣುವ ನಿರೀಕ್ಷೆಯಿಂದಾಗಿ ಬ್ಯಾಂಕ್ಗಳು ಹಾಗೂ ರಫ್ತು ವಹಿವಾಟುದಾರರು ಡಾಲರ್ಗಳ ಮಾರಾಟದಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಫಾರೆಕ್ಸ್ ಡೀಲರ್ಗಳು ಅಭಿಪ್ರಾಯಪಟ್ಟಿದ್ದಾರೆ.ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಏಷ್ಯಾ ದೇಶಗಳ ಕರೆನ್ಸಿಗಳು ಕೂಡಾ ಬೆಂಬಲ ನೀಡಿದ್ದರಿಂದ ಫಾರೆಕ್ಸ್ ಮಮಾರುಕಟ್ಟೆಯಲ್ಲಿ ಡಾಲರ್ ದುರ್ಬಲಗೊಂಡಿದೆ ಎಂದು ತಿಳಿಸಿದ್ದಾರೆ. ಏಷ್ಯಾದ ಹಾಂಗ್ಕಾಂಗ್ನ ಹಾಂಗ್ಸೆಂಗ್ ಶೇರುಪೇಟೆ ವಹಿವಾಟಿನಲ್ಲಿ ಶೇ.1.23 ಪಾಯಿಂಟ್ಗಳ ಏರಿಕೆ ಕಂಡಿದೆ. |