ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತ-ಬಾಂಗ್ಲಾ ವ್ಯಾಪಾರ ಒಪ್ಪಂದ ನವೀಕರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಬಾಂಗ್ಲಾ ವ್ಯಾಪಾರ ಒಪ್ಪಂದ ನವೀಕರಣ
PTI
ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮುಂಬರುವ ತಿಂಗಳಿನಲ್ಲಿ ಬಾಂಗ್ಲಾ ದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಲಾಗುವುದು ಎಂದು ಭಾರತದಲ್ಲಿರುವ ಬಾಂಗ್ಲಾ ದೇಶದ ರಾಯಭಾರಿ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಣ ವ್ಯಾಪಾರ ಒಪ್ಪಂದ ಮಾರ್ಚ್‌ ತಿಂಗಳಿಗೆ ಅಂತ್ಯಗೊಳ್ಳುವುದರಿಂದ ನವೀಕರಣದ ಅಗತ್ಯವಿದೆ ಎಂದು ಬಾಂಗ್ಲಾ ದೇಶದ ವಿದೇಶಾಂಗ ಸಚಿವ ದಿಪು ಮೋನಿಯವರನ್ನು ಭೇಟಿ ಮಾಡಿದ ನಂತರ ಭಾರತದ ರಾಯಭಾರಿ ಪಿನಾಕ್ ರಂಜನ್ ಚಕ್ರವರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಚಿವ ಪ್ರಣಬ್ ಮುಖರ್ಜಿ ಫೆಬ್ರವರಿ 8-9 ರಂದು ಅಧಿಕೃತ ಕಾರ್ಯಕ್ರಮಗಳಿಗಾಗಿ ಭೇಟಿ ನೀಡಲಿದ್ದು, ಅವಾಮಿ ಲೀಗ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹಿರಿಯ ವಿದೇಶಾಂಗ ಸಚಿವರು ಬಾಂಗ್ಲಾಗೆ ಭೇಟಿ ನೀಡುವುದು ಮೊದಲನೇ ಬಾರಿಯಾಗಿದೆ.

ಕಳೆದ ಮೂರು ವರ್ಷಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮುಂಬರುವ ಮಾರ್ಚ್‌ ತಿಂಗಳಲ್ಲಿ ಅಂತ್ಯಗೊಳ್ಳಲಿರುವುದರಿಂದ ನವೀಕರಣದ ಅಗತ್ಯವಿದೆ ಎಂದು ಚಕ್ರವರ್ತಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರ್ತಿ ಏರ್‌ಟೆಲ್‌ಗೆ 1,976 ಕೋಟಿ ನಿವ್ವಳ ಲಾಭ
ಸತ್ಯಂ ವಂಚನೆಯ ಪ್ರಕರಣವಾಗಿದೆ:ಚಿದಂಬರಂ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಕಂಪೆನಿ ಕಾನೂನು ಮಂಡಳಿಯ ಆದೇಶ
ನೂತನ 'ಲಿನಿಯ' ಕಾರು
ಜೀ ಎಂಟರ್‌ಟೇನ್‌ಮೆಂಟ್‌‌ ನಿವ್ವಳ ಲಾಭದಲ್ಲಿ ಕುಸಿತ