ಕಳೆದ ಕೆಲ ವಾರಗಳಿಂದ ಇಳಿಕೆಯತ್ತ ಸಾಗುತ್ತಿದ್ದ ಹಣದುಬ್ಬರ ದರ , ಜನೆವರಿ 10ಕ್ಕೆ ವಾರಂತ್ಯಗೊಂಡಂತೆ ಶೇ.5.60ರಷ್ಟು ಏರಿಕೆ ಕಂಡಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.ಅಗತ್ಯ ವಸ್ತುಗಳ ಸಗಟು ಸೂಚ್ಯಂಕ ದರ ಕಳೆದ ವಾರಕ್ಕೆ ಹೋಲಿಸಿದಲ್ಲಿ ಹಣದುಬ್ಬರ ಶೇ.0.4 ರಷ್ಟು ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.ಪದಾರ್ಥ ವಸ್ತುಗಳ ಸೂಚ್ಯಂಕ ದರದಲ್ಲಿ ಶೇ.1.2 ರಷ್ಟು ಏರಿಕೆಯಾಗಿದ್ದು, ಉತ್ಪಾದಕ ವಸ್ತುಗಳ ದರಗಳಲ್ಲಿ ಶೇ.0.2 ರಷ್ಟು ಏರಿಕೆಯಾಗಿದೆ. ಇಂಧನ,ವಿದ್ಯುತ್, ಲ್ಯೂಬ್ರಿಕೆಂಟ್ಸ್ ದರಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲವೆಂದು ಸಚಿವಾಲಯದ ಮೂಲಗಳು ತಿಳಿಸಿವೆ. ಜನೆವರಿ ತಿಂಗಳ ಆರಂಭದಲ್ಲಿ ಟ್ರಕ್ ಮಾಲೀಕರ ಮುಷ್ಕರದಿಂದಾಗಿ ಅಹಾರ ಧಾನ್ಯಗಳ ಸೂಚ್ಯಂಕ ದರಗಳಲ್ಲಿ ಏರಿಕೆಯಾಗಿದ್ದರಿಂದ ಪ್ರಸಕ್ತ ವಾರದಲ್ಲಿ ಹಣದುಬ್ಬರದಲ್ಲಿ ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ 2008ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಗಗನಕ್ಕೇರಿದ್ದರಿಂದ ಹಣದುಬ್ಬರ ಎರಡಂಕಿಗೆ ಏರಿಕೆಯಾಗಿತ್ತು. ಆದರೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಇಳಿಕೆಯಾಗಿದ್ದರಿಂದ ಹಣದುಬ್ಬರ ಏಕಂಕಿಗೆ ತಲುಪಿದೆ. |