ಹೈದ್ರಾಬಾದ್ : ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಸ್ಪಷ್ಟನೆ ಪಡೆಯಲು ಪೊಲೀಸರಿಗೆ ಅವಕಾಶ ದೊರೆಯಲು ಸತ್ಯಂನ ಕಳಂಕಿತ ಸಂಸ್ಥಾಪಕ ರಾಮಲಿಂಗಾರಾಜು ಮತ್ತು ಮಾಜಿ ಮುಖ್ಯ ಆರ್ಥಿಕ ಅಧಿಕಾರಿ ಶ್ರೀನಿವಾಸ್ ಅವರನ್ನು ಒಂದು ದಿನದ ಮಟ್ಟಿಗೆ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸತ್ಯಂ ಆರೋಪಿ ರಾಜು ಸುಮಾರು 12 ಸಾವಿರ ನಕಲಿ ಉದ್ಯೋಗಿಗಳ ಖಾತೆಗಳನ್ನು ಸೃಷ್ಟಿಸಿ ಪ್ರತಿ ತಿಂಗಳು 20 ಕೋಟಿ ರೂ. ತಮ್ಮ ಖಾತೆ ಜಮಾ ಮಾಡುತ್ತಿದ್ದರು ಎಂದು ಆಂಧ್ರಪ್ರದೇಶದ ಅಪರಾಧ ಪತ್ತೆ ದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದ್ದಾರೆ.
ಸತ್ಯಂನಲ್ಲಿ 40 ಸಾವಿರ ಉದ್ಯೋಗಿಗಳಿದ್ದು,ಆದರೆ ದಾಖಲಾತಿಗಳ ಪ್ರಕಾರ 52 ಸಾವಿರ ಉದ್ಯೋಗಿಗಳ ಉಲ್ಲೇಖವಿದೆ ಎಂದು ರಾಜು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಸರಕಾರಿ ವಕೀಲರು ಹೇಳಿಕೆ ನೀಡಿದ್ದಾರೆ. |