ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಂನ 77 ವರ್ಷಗಳ ಪಾರುಪತ್ಯಕ್ಕೆ ಟೊಯೋಟಾ ಅಂಕುಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಂನ 77 ವರ್ಷಗಳ ಪಾರುಪತ್ಯಕ್ಕೆ ಟೊಯೋಟಾ ಅಂಕುಶ
PTI
ಟೋಯೋಟಾ ವಾಹನೋದ್ಯಮ ಸಂಸ್ಥೆ, ಎದುರಾಳಿ ಕಂಪೆನಿಯಾದ ಡೆಟ್ರಾಯಿಟ್‌ನ ಜನರಲ್ ಮೋಟಾರ್ಸ್ ವಾಹನೋದ್ಯಮ ಸಂಸ್ಥೆಯನ್ನು ಹಿಂದಕ್ಕೆ ತಳ್ಳಿ ಸುಮಾರು 77 ವರ್ಷಗಳ ನಂತರ ಜಗತ್ತಿನ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಾರುಗಳ ಮಾರಾಟದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ, ಅಮೆರಿಕದ ಮೂರು ಪ್ರಮುಖ ವಾಹನೋದ್ಯಮ ಕಂಪೆನಿಗಳು ಸೇರಿದಂತೆ ಜಗತ್ತಿನ ಅನೇಕ ವಾಹನೋದ್ಯಮ ಸಂಸ್ಥೆಗಳಿಗೆ ಅಸ್ತಿತ್ವದ ಆತಂಕ ಕಾಡುತ್ತಿದೆ.

ಕಳೆದ ವರ್ಷ ಜನರಲ್ ಮೋಟಾರ್ಸ್ 8.35 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿದ್ದು,ಟೋಯೋಟಾ 8.97 ಮಿಲಿಯನ್ ವಾಹನಗಳನ್ನು ಮಾರಾಟ ಮಾಡಿ ಜನರಲ್‌ ಮೋಟಾರ್ಸ್‌ನ 77 ವರ್ಷಗಳ ಏಕಚಕ್ರಾಧಿಪತ್ಯವನ್ನು ಅಂತ್ಯಗೊಳಿಸಿದೆ.

ಆದರೆ ಜಾಗತಿಕ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಉಭಯ ಕಂಪೆನಿಗಳು ವಾಹನಗಳ ಬೇಡಿಕೆ ಕುಸಿತವನ್ನು ಎದುರಿಸುತ್ತಿವೆ. ಜನರಲ್ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಶೇ.11 ರಷ್ಟು ಕುಸಿತವಾಗಿದ್ದು, ಟೋಯೋಟಾ ವಾಹನಗಳ ಮಾರಾಟದಲ್ಲಿ ಶೇ.4 ರಷ್ಟು ಕುಸಿತವಾಗಿದೆ.

ಟೋಯೋಟಾ ಬೆಳವಣಿಗೆಗಳು ಸಕಾರಾತ್ಮಕವಲ್ಲ. ಜನರಲ್ ಮೋಟಾರ್ಸ್ ಸಂಸ್ಥೆಯ ವಾಹನಗಳ ಮಾರಾಟದಲ್ಲಿ ಕುಸಿತವಾಗಿದ್ದರಿಂದ ಟೋಯೋಟಾಗೆ ಜನರಲ್ ಮೋಟಾರ್ಸ್‌ ಸ್ಥಾನವನ್ನು ಪಡೆಯುವ ಅವಕಾಶ ದೊರೆತಿದೆ ಎಂದು ಟೋಕಿಯೋ ರಿಸರ್ಚ್ ಸೆಂಟರ್‌ನ ವಾಹನೋದ್ಯಮ ತಜ್ಞ ಮಮೊರು ಕಟೊ ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಪಲ್‌ಗೆ 10 ಬಿಲಿಯನ್ ಡಾಲರ್‌ ಆದಾಯ
ಸತ್ಯಂ ರಾಜು ಬಂಧನದ ಅವಧಿ ವಿಸ್ತರಣೆ
ಹಣದುಬ್ಬರ ಶೇ.5.6ರಷ್ಟು ಏರಿಕೆ
ಇಂದು ಸತ್ಯಂ ನಿರ್ದೇಶಕ ಮಂಡಳಿ ಸಭೆ
ಭಾರತ-ಬಾಂಗ್ಲಾ ವ್ಯಾಪಾರ ಒಪ್ಪಂದ ನವೀಕರಣ
ಭಾರ್ತಿ ಏರ್‌ಟೆಲ್‌ಗೆ 1,976 ಕೋಟಿ ನಿವ್ವಳ ಲಾಭ