ಮೊಬೈಲ್ ಸಂಸ್ಥೆಯಾದ ಹಚ್ ಎಸ್ಸಾರ್‌ನ್ನು 11 ಮಿಲಿಯನ್ ಡಾಲರ್‌ಗೆ ಖರೀದಿಸಿರುವುದಕ್ಕೆ ಸಂಬಂಧಿಸಿ, ತೆರಿಗೆ ಪಾವತಿಸುವಂತೆ ಭಾರತೀಯ ಆದಾಯ ತೆರಿಗೆ ಇಲಾಖೆಯು ನೀಡಿದ್ದ ನೋಟೀಸ್ ಪ್ರಶ್ನಿಸಿ ವೋಡಾಫೋನ್ ಸಲ್ಲಿಸಿದ್ದ ವಿಶೇಷ ರಜಾ ಕಾಲದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಇದು ಗಡಿಯಾಚೆಗಿನ ಖರೀದಿ ಪ್ರಕ್ರಿಯೆಯಾಗಿರುವುದರಿಂದ ಯಾವ ನ್ಯಾಯಾಂಗ ವ್ಯಾಪ್ತಿಗೆ ಬರುತ್ತದೆ ಎಂಬ ಕುರಿತು ನಿರ್ಧರಿಸಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಸುಪ್ರೀಂ ಕೋರ್ಟು ವೋಡಾಫೋನ್‌ಗೆ ಸೂಚಿಸಿರುವುದಾಗಿ ಅದರ ತೆರಿಗೆ ಲೆಕ್ಕಪತ್ರ ನೋಡಿಕೊಳ್ಳುತ್ತಿರುವ ಪ್ರೈಸ್‌ವಾಟರ್‌ಹೌಸ್ ಕೂಪರ್ಸ್ ಮೂಲಗಳು ತಿಳಿಸಿವೆ. |