ಜಾಗತಿಕ ಹಣಕಾಸು ಬಿಕ್ಕಟ್ಟು ಭಾರತದಿಂದ ರಫ್ತಾಗುವ ಚಹಾ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 2008 ನವೆಂಬರ್ ಅಂತ್ಯದ ವೇಳೆಗೆ ಚಹಾ ರಫ್ತಿನಲ್ಲಿ 15 ಮಿಲಿಯನ್ ಕೆ.ಜಿ. ದಾಖಲೆಯ ವೃದ್ಧಿಯುಂಟಾಗಿದೆ. ಚಳಿಗಾಲದಲ್ಲಿ ಚಹಾ ಉತ್ಪಾದನೆಯಲ್ಲಿ ಕುಸಿತವಾಗಿದ್ದರೂ, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದಲ್ಲಿ ಚಹಾ ರಫ್ತು ಮಾಡುವ ಬಗ್ಗೆ ಚಹಾ ಉದ್ಯಮ ನಿರೀಕ್ಷಿಸುತ್ತಿದೆ. |