ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐದನೇ ಬಾರಿ ಸ್ಥಾವರ ಸ್ಥಗಿತಗೊಳಿಸಿದ ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐದನೇ ಬಾರಿ ಸ್ಥಾವರ ಸ್ಥಗಿತಗೊಳಿಸಿದ ಟಾಟಾ
ಭಾರತದ ಬೃಹತ್ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಬೇಡಿಕೆಯಲ್ಲಿ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದು, ಇದರಿಂದಾಗಿ ಜೆಮ್‌ಶೆಡ್‌ಪುರದಲ್ಲಿರುವ ತನ್ನ ವಾಣಿಜ್ಯ ವಾಹನ ತಯಾರಿಕಾ ಘಟಕವನ್ನು ಐದನೇ ಬಾರಿಗೆ ಜನವರಿ 27ರಿಂದ 31ತನಕ ಮುಚ್ಚುಗಡೆಗೊಳಿಸುವುದಾಗಿ ತಿಳಿಸಿದೆ.

ಜಾಗತಿಕ ಹಿಂಜರಿತದಿಂದಾಗಿ ವಾಹನ ಉದ್ದಿಮೆಗಳಲ್ಲಿ ಉಂಟಾದ ಬೇಡಿಕೆಯ ಕೊರತೆಯ ಪರಿಣಾಮ ಈ ಹಿಂದೆ ಟಾಟಾ ಮೋಟಾರ್ಸ್ ನವೆಂಬರ್ 6ರಿಂದ 8, ನವೆಂಬರ್ 25ರಿಂದ 29, ಡಿಸೆಂಬರ್ 8ರಿಂದ 13 ಮತ್ತು ಡಿಸೆಂಬರ್ 28-31ರ ವರೆಗೆ ನಾಲ್ಕು ಬಾರಿ ಜೆಮ್‌ಶೆಡ್‌ಪುರ ಘಟಕವನ್ನು ಮುಚ್ಚುಗಡೆಗೊಳಿಸಿತ್ತು.

ವಾಹನ ಉತ್ಪಾದನಾ ಬೇಡಿಕೆಗಳ ವೇಳಾಪಟ್ಟಿಯಲ್ಲಿ ಉಂಟಾದ ಬದಲಾವಣೆಯಿಂದಾಗಿ ಜನವರಿಯಲ್ಲಿ 12ರಿಂದ 17ರ ವರೆಗಿನ ಘಟಕ ಮುಚ್ಚುಗಡೆ ನಿರ್ಧಾರವನ್ನು ಕಂಪೆನಿ ರದ್ದುಗೊಳಿಸಿತ್ತು.

ಬೇಡಿಕೆ ಕೊರತೆಯಿಂದಾಗಿ ಸುಮಾರು ಒಂದು ದಶಕದ ಹಿಂದೆಯೂ ಈ ಘಟಕದಲ್ಲಿ ಟ್ರಕ್ಕುಗಳು, ಟ್ರೈಲರ್‌ಗಳು, ಟಿಪ್ಪರ್‌ಗಳು ಹಾಗೂ ಇತರ ಮಲ್ಟಿ-ಆಕ್ಸಿಲ್ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಿ ಹಣಕಾಸು ಹಿನ್‌ಸರಿತ ಇಲ್ಲ: ಚಿದು
ರಾಜು ಜಾಮೀನು ವಿಚಾರಣೆ ಮುಂದೂಡಿಕೆ
ಚೀನಾ ಆಟಿಕೆಗಳಿಗೆ ನಿಷೇಧ
ಆರ್ಥಿಕ ಕುಸಿತ: 'ಸುಪಾರಿ' ಔಟ್‌ಸೋರ್ಸಿಂಗ್!
ಕೆನರಾ ಬ್ಯಾಂಕ್‌ಗೆ 701.50 ಕೋಟಿ ನಿವ್ವಳ ಲಾಭ
ಚಹಾ ರಫ್ತು ಹೆಚ್ಚಳ