ವಾಲ್‌ಸ್ಟ್ರೀಟ್ ಅಂದಾಜುಗಳನ್ನು ದಾಟಿರುವ ಗೂಗಲ್ ಇಂಕ್ ನಾಲ್ಕನೆ ತ್ರೈಮಾಸಿಕ ಅವಧಿಯಲ್ಲಿ 382 ಮಿಲಿಯನ್ ಡಾಲರ್ ನಿವ್ವಳಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಸಂಸ್ಥೆಯ ಲಾಭ 1.12 ಬಿಲಿಯನ್ ಡಾಲರ್ ಆಗಿತ್ತು.
ಗೂಗಲ್ ಸ್ವಯಂ ಬ್ರಾಂಡೆಡ್ ವೆಬ್‌ಸೈಟ್‌ಗಳ ಜಾಹೀರಾತುಗಳು ಈ ಮುಂಚೂಣಿ ಅಂತರ್ಜಾಲ ತಾಣವು ಐಟಿ ವಲಯದಲ್ಲಿ ಮುಸುಕಿರುವ ಹಿಂಸರಿತದ ಛಾಯೆಯನ್ನು ತೊಡೆದುಕೊಳ್ಳಲು ಸಹಕರಿಸಿದೆ.
ರಾಯಿಟರ್ಸ್ ಅಂದಾಜಿನ ಪ್ರಕಾರ ಇದರ ಶೇರೊಂದಕ್ಕೆ 4.96 ಡಾಲರ್ ಲಾಭ ನಿರೀಕ್ಷಿಸಲಾಗಿತ್ತು. ಆದರೆ ಶೇರೊಂದರಲ್ಲಿ 5.10 ಡಾಲರ್ ಲಾಭ ಗಳಿಸಿಕೊಂಡಿದೆ.
ಸಂಸ್ಥೆಯ ಲಾಭವು ಶೇ.18ರಷ್ಟು ಅಂದರೆ 5.7 ಶತಕೋಟಿ ಹೆಚ್ಚಿದೆ. ಆದರೆ ಶೇ.50ರಷ್ಟು ವೃದ್ಧಿಯನ್ನು ಅನುಭವಿಸುತ್ತಿದ್ದ ಸಂಸ್ಥೆಯು ಹಿನ್ನಡೆ ಸಾಧಿಸಿದೆ. ಇದಕ್ಕೆ ಜಗತ್ತು ಎದುರಿಸುತ್ತಿರುವ ದುರ್ಬಲ ಆರ್ಥಿಕತೆ ಮತ್ತು ಕಾರ್ಪೋರೇಟ್ ಸಂಸ್ಥೆಗಳು ಜಾಹೀರಾತಿಗೆ ವ್ಯಯಿಸಿರುವ ವೆಚ್ಚವನ್ನು ಕಡಿತಗೊಳಿಸಿರುವುದು ಆಗಿದೆ.
|