ಕಳೆದ 18ವರ್ಷಗಳ ಬಳಿಕ ಮೊದಲ ಬಾರಿಗೆ ಆರ್ಥಿಕ ಹೊಡೆತದಿಂದ ಬ್ರಿಟನ್ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿರುವುದಾಗಿ ತಿಳಿಸಿದೆ.
ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ವರದಿಯನ್ವಯ ದೇಶದ ಆರ್ಥಿಕದಲ್ಲಿ ಶೇ.1.5ರಷ್ಟು ಕುಸಿತ ಕಂಡಿದೆ. ಅಲ್ಲದೇ ಎರಡು ಕ್ವಾರ್ಟರ್ಸ್‌ನಲ್ಲಿಯೂ ಋಣಾತ್ಮಕ ಅಂಕಿ-ಅಂಶಗಳಿದ್ದು, ಈ ಆರ್ಥಿಕ ಹೊಡೆತದಲ್ಲಿ ಅಮೆರಿಕ, ಸಿಂಗಾಪುರ್, ಜರ್ಮನಿ, ಇಟಲಿ ಸೇರಿದಂತೆ ಅನೇಕ ಯುರೋಪಿಯನ್ ದೇಶಗಳು ಸೇರಿವೆ.
2008ರ ಮೂರನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.0.6ಕ್ಕೆ ಕುಸಿದಿರುವುದಾಗಿ ವಿವರಿಸಿದೆ. ಇದರಿಂದ ಕೈಗಾರಿಕೆಗಳಲ್ಲಿ ಉತ್ಪಾದನೆ ಮತ್ತು ಸೇವೆಗಳಲ್ಲಿಯೂ ಸಾಕಷ್ಟು ಹೊಡೆತ ಬಿದ್ದಿರುವುದಾಗಿ ಬ್ರಿಟನ್ ತಿಳಿಸಿದೆ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಮೆಡಾಫ್‌ನ ಮಹಾಮೋಸದಿಂದ ಆರ್ಥಿಕ ಕುಸಿತಕ್ಕೆ ಒಳಗಾಗಿದ್ದರೆ, ಅದರ ಪರಿಣಾಮ ಎಂಬಂತೆ ಪ್ರಮುಖ ದೇಶಗಳೂ ಕೂಡ ಆರ್ಥಿಕ ಹೊಡೆತದ ಬಿಸಿಗೆ ತತ್ತರಿಸುವಂತಾಗಿದೆ.
ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಪ್ರಮುಖ ಆರ್ಥಿಕ ಯೋಜನೆಗಳನ್ನು ಮೂರು ತಿಂಗಳಲ್ಲಿ ಜಾರಿಗೆ ತಂದು, ಆರ್ಥಿಕ ಹೊಡೆತಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಹೇಳಿದೆ. |