ಒಂದು ಪುಟ್ಟ ಅಂಗಡಿಯು ಇದ್ದಕ್ಕಿದ್ದಂತೆ ದೆಹಲಿಯ ಅತ್ಯಮೂಲ್ಯ ಆಸ್ತಿಯಾಗಿದೆ. ಸಫ್ದರ್‌ಜಂಗ್ ಆಸ್ಪತ್ರೆಯ ಪಕ್ಕದಲ್ಲಿ ಹಾಗೂ ಏಮ್ಸ್ ಆಸ್ಪತ್ರೆಯ ಎದುರಿಗಿರುವ ನಂ.3 ಸಂಖ್ಯೆಯ ಅಂಗಡಿಯು ತಿಂಗಳೊಂದರ 12,09,000 ರೂಪಾಯಿ ಬಾಡಿಗೆಗೆ ಹರಾಜಾಗಿದೆ. ಆದರೆ ಕೊಳಕು ಸಪೂರ ಓಣಿಯ ಇಕ್ಕಟ್ಟಾದ ನಡೆಯಲು ಜಾಗವಿಲ್ಲದ ಈ ಓಣಿಯ ಈ ಪರಿಯ ಬಾಡಿಗೆ ನಿಗದಿಯು ಹುಬ್ಬೇರಿಸುವಂತಿದೆ.
ಆದರೆ ಈ ದುಬಾರಿ ಅಂಗಡಿಯ ಪಕ್ಕಕ್ಕಿರುವ ಐದನೆ ನಂಬರಿನ ಅಂಗಡಿಯೂ ಹರಾಜಾಗಿದೆ. ಆದರೆ ಅದರ ಬಾಡಿಗೆ ಕೇವಲ 58,000 ರೂಪಾಯಿ ಮಾತ್ರ.
ಇದ್ಯಾಕೆ ಹಿಂಗೆ ಅಂದರೆ, ಮೂರು ನಂಬರಿನ ಅಂಗಡಿಯನ್ನು ಮೆಡಿಕಲ್ ಶಾಪ್ ಆಗಿ ಬಳಸಬಹುದಾಗಿದೆ. ಮೆಡಿಕಲ್ ಶಾಪ್ ಹಾಕಲು ಇರಬೇಕಿರುವ 110 ಚದರ ಅಡಿಯ ವಿಸ್ತಾರದ ಕಾನೂನನ್ನು ಈ ಅಂಗಡಿ ಭರಿಸುತ್ತದೆ. ಅಂಗಡಿ ಸಂಖ್ಯೆ 5ನ್ನು ಜನರಲ್ ಸ್ಟೋರ್ ಆಗಿ ಬಳಸಲಾಗುತ್ತಿತ್ತು. ದುಬಾರಿ ಬಾಡಿಗೆಯ ಮೂರನೆ ಸಂಖ್ಯೆಯ ಅಂಗಡಿಯನ್ನು ಈ ಹಿಂದೆಯೂ ಔಷಧಿ ಅಂಗಡಿಯಾಗಿ ಬಳಸಲಾಗುತ್ತಿತ್ತು.
ಈ ಅಂಗಡಿಯನ್ನು ಮುಕೇಶ್ ಕುಮಾರ್ ಎಂಬ ವ್ಯಕ್ತಿ ಹರಾಜಿನಲ್ಲಿ ಪಡೆದಿದ್ದಾರೆ. ಆದರೆ ಇದರ ಔಷಧಿ ಅಂಗಡಿಗಳವರಿಗೆ ಈ ಕುಮಾರ್ ಇಷ್ಟುದೊಡ್ಡ ಮೊತ್ತದ ಬಾಡಿಗೆ ಹೇಗೆ ಪೂರೈಸುತ್ತಾರೆ ಎಂಬುದು ದೊಡ್ಡ ಸಂದೇಹ.
|