ತೆರಿಗೆ ಕಟ್ಟುವ ವಿಷಯಕ್ಕೆ ಸಂಬಂಧಿಸಿದಂತೆ ವೊಡಾಫೋನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ದೂರ ಸಂಪರ್ಕ ಇಲಾಖೆ (ಐಟಿ) ನೀಡಿರುವ ಷೋಕಾಸ್ಗೆ ಉತ್ತರ ನೀಡುವಂತೆ ಸಲಹೆ ಮಾಡಿದೆ.
ಬಾಂಬ್ ಹೈಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದ್ದನ್ನು ನ್ಯಾಯಮೂರ್ತಿ ಎಸ್.ಬಿ.ಸಿನ್ನಾ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತ್ತು. 2007ರ ಫೆಬ್ರುವರಿಯಲ್ಲಿ ಹಚ್ಸನ್ ಎಸ್ಸಾರ್ ಕಂಪೆನಿಯ ಶೇ.67ರಷ್ಟು ಷೇರು ಸ್ವಾಧೀನ ಪಡಿಸಿಕೊಂಡಿರುವ ನೆದರ್ಲ್ಯಾಂಡ್ ಮೂಲದ ವೊಡಾಫೋನ್ 1.7ಶತಕೋಟಿ ಡಾಲರ್ ತೆರಿಗೆ ಕಟ್ಟುವಂತೆ ದೂರ ಸಂಪರ್ಕ ಇಲಾಖೆ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. |