ಹೈದರಾಬಾದ್: ಆರು ಮಂದಿ ಸದಸ್ಯರ ಸತ್ಯಂ ಕಂಪ್ಯೂಟರ್ಸ್ ಹೊಸ ಆಡಳಿತ ಮಂಡಳಿಯು ಸೋಮವಾರದ ಬದಲು ಮಂಗಳವಾರ ಸಭೆ ಸೇರಲಿದೆ. ಸಭೆಯನ್ನು ಮುಂದೂಡಿರುವ ಕುರಿತು ಸತ್ಯಂ ವಕ್ತಾರರು ಯಾವುದೇ ಕಾರಣಗಳನ್ನು ನೀಡಿಲ್ಲ. ಸಿಇಒ ಮತ್ತು ಸಿಎಫ್ಒಗಳ ನೇಮಕದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಸತ್ಯಂ ಆಡಳಿತ ಮಂಡಳಿ ಸೋಮವಾರ ಸಭೆ ಸೇರುವುದಾಗಿ ಈ ಹಿಂದೆ ಪ್ರಕಟಸಿತ್ತು. |