ನ್ಯೂಯಾರ್ಕ್: ಆರ್ಥಿಕ ಬಿಕ್ಕಟ್ಟು ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಹೊಸ ರಾಷ್ಟ್ರಪತಿ ಬರಾಕ್ ಒಬಾಮ ಅವರು, ತೊಂದರೆಯ ಸುಳಿಯಲ್ಲಿರುವ ಬ್ಯಾಂಕುಗಳ ರಾಷ್ಟ್ರೀಕರಣ ಅಥವಾ ಭಾಗಶಃ ರಾಷ್ಟ್ರೀಕರಣಗೊಳಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಣಕಾಸು ಸಂಸ್ಥೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರವು ತೆರಿಗೆದಾರರ ಹಣವನ್ನು ವ್ಯಯಸುತ್ತಿದ್ದು, ಇದೀಗ ಬ್ಯಾಂಕುಗಳ ರಾಷ್ಟ್ರೀಕರಣದ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. |