ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿನೀತಿ: ಪ್ರಸಕ್ತ ದರಗಳಲ್ಲಿ ಬದಲಾವಣೆ ಇಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿನೀತಿ: ಪ್ರಸಕ್ತ ದರಗಳಲ್ಲಿ ಬದಲಾವಣೆ ಇಲ್ಲ
ND
ಜಾಗತಿಕ ಆರ್ಥಿಕ ಹಿನ್ಸರಿತವು ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವ ಕಾರಣ ಆರ್ಥಿಕಾಭಿವೃದ್ಧಿ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಶೇಕಡಾ ಏಳಕ್ಕೆ ಇಳಿಸಿದೆಯಾದರೂ, ಪ್ರಮುಖ ನೀತಿ ದರಗಳು ಮತ್ತು ಅನುಪಾತಗಳನ್ನು ಬದಲಿಸಿಲ್ಲ.

ಇದಲ್ಲದೆ, ಮಾರ್ಚ್ ಅಂತ್ಯದೊಳಗೆ ಹಣದುಬ್ಬರ ದರವನ್ನು ಶೇಕಡಾ ಮೂರಕ್ಕೆ ಇಳಿಸುವ ಗುರಿಯನ್ನು ಹಮ್ಮಿಕೊಂಡಿದೆ. ತನ್ನ ತ್ರೈಮಾಸಿಕ ವಾರ್ಷಿಕ ಹಣಕಾಸು ನೀತಿಯ ಪರಿಶೀಲನೆಯ ವೇಳೆ, ಎಸ್ಎಲ್ಆರ್ ಅನ್ನು ಶೇ.1.5ರಷ್ಟು ಸಡಿಲಿಸುವ ಮೂಲಕ ಮ್ಯೂಚುವಲ್ ಫಂಡ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಗೃಹಸಾಲ ಸಂಸ್ಥೆಗಳ ಹಣದ ಪೂರೈಕೆಯ ಲಿಕ್ವಿಡಿಟಿಯನ್ನು ಭರಿಸಲು ಬ್ಯಾಂಕುಗಳಿಗೆ ಮರು ಹಣಪೂರೈಕೆ ಸೌಲಭ್ಯವನ್ನು ಅಪೆಕ್ಸ್ ಬ್ಯಾಂಕ್ ಸೆಪ್ಟೆಂಬರ್ 30ರ ತನಕ ವಿಸ್ತರಿಸಿದೆ.

ಅಂತೆಯೆ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಿಗೆ, ಬ್ಯಾಂಕಿನ ಪ್ರತಿ ಬಾಧ್ಯತೆಯ ಮೇಲೆ ಶೇಕಡಾ ಒಂದರಷ್ಟು ವಿಶೇಷ ಮರುಹಣಪೂರೈಕೆ ಸೌಲಭ್ಯವನ್ನು ಸೆಪ್ಟಂಬರ್ 30ರ ತನಕ ವಿಸ್ತರಿಸಲಾಗಿದೆ. ಈ ಎರಡೂ ಸೌಲಭ್ಯಗಳನ್ನು ಈ ಹಿಂದೆ ಜೂನ್ 30ರ ತನಕ ನಿಗದಿ ಪಡಿಸಲಾಗಿತ್ತು.

ಪ್ರಸಕ್ತ ಮಾರುಕಟ್ಟೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ತಮ್ಮ ಹಣದ ಹರಿವು ನಿಭಾವಣೆ ಕಾರ್ಯಗಳಿಗೆ ನಿರಂತರ ನಮ್ಯತೆ ಒದಗಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲೇ ಸಿಬ್ಬಂದಿ ನೇಮಕ
ಬಿಎನ್‌ಪಿ ಅಧ್ಯಯನ ವರದಿ
ಅಮೆರಿಕ ಬ್ಯಾಂಕುಗಳ ರಾಷ್ಟ್ರೀಕರಣ?
ಯಾಹೂ ವೇತನ ಏರಿಕೆಗೆ ತಡೆ
ಸತ್ಯಂ ಮಂಡಳಿ ಸಭೆ ಮಂಗಳವಾರ
ವೊಡಾಫೋನ್ ತೆರಿಗೆ ಅರ್ಜಿ ಸುಪ್ರೀಂನಿಂದ ವಜಾ