ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವವು ಮತ್ತಷ್ಟು ತೀವ್ರಗತಿ ತಲುಪಿದ್ದು, ಹಲವಾರು ಕಂಪೆನಿಗಳು ಒಂದೇ ದಿನದಲ್ಲಿ 85,000 ಉದ್ಯೋಗವನ್ನು ಕಡಿತ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದಲ್ಲಿ ಆರಂಭವಾದ ಈ ಬಿಕ್ಕಟ್ಟಿನಿಂದಾಗಿ ಈಗಾಗಲೇ ಹಲವಾರು ಕಂಪನಿಗಳು ಉದ್ಯೋಗ ಕಡಿತ, ವೆಚ್ಚ ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡಿದ್ದು, ವಿಶ್ವದ ಅತಿದೊಡ್ಡ ಆರ್ಥಿಕತೆ ಎಂದು ಪರಿಗಣಿಸಲಾದ ಅಮೆರಿಕದ ಆರ್ಥಿಕತೆಯ ಪುನಶ್ಚೇತನಕ್ಕೆ ಉತ್ತೇಜನಾ ಕ್ರಮಗಳನ್ನು ಘೋಷಿಸಲು ಹೊಸ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ ಒತ್ತಡ ಹೆಚ್ಚಿದೆ. |