ಜಪಾನ್‌ನ ಪ್ರಖ್ಯಾತ ಮೋಟಾರ್ ಕಂಪೆನಿಯಾದ ಯಮಾಹಾ ಮೋಟಾರ್ ಕಂಪೆನಿಯು ದೋಷ ಕಂಡುಬಂದಿರುವ 53,814 ಮೋಟಾರ್ ಬೈಕ್‌ಗಳನ್ನು ಮಾರುಕಟ್ಟೆಯಿಂದ ವಾಪಸ್ ಕರೆಸಿಕೊಳ್ಳಲಿದೆ.
ಹಿಂಭಾಗದ ಶಾಕ್ ಅಬ್ಸಾರ್ಬರ್‌ಗಳು ಸವಾರನಿಗೆ ತ್ರಾಸ ನೀಡುತ್ತಿರುವ ಕಾರಣದಿಂದಾಗಿ ಅವುಗಳನ್ನು ಬದಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳವಾರ ಹೊರಡಿಸಿರುವ ಹೇಳಿಕೆಯಲ್ಲಿ ಅದು ತಿಳಿಸಿದೆ.
'ಟಿಡಬ್ಲ್ಯು200ಇ' ಮಾಡೆಲ್ ಬೈಕ್‌ಗಳಾದ ಇವುಗಳನ್ನು 1987 ಮತ್ತು 2001ರ ಮಧ್ಯದ ಕಾಲಘಟ್ಟದಲ್ಲಿ ತಯಾರಿಸಲಾಗಿತ್ತು.
ಮೋಟಾರ್ ಬೈಕ್ ಚಲಾಯಿಸುವ ವೇಳೆ ದಾಖಲಾದ ಇಂತಹ ಆರು ಪ್ರಕರಣಗಳಿಂದಾಗಿ ಕಂಪೆನಿಯು ತನ್ನ 'ಟಿಡಬ್ಲ್ಯು200ಇ' ಬೈಕ್‌ಗಳನ್ನು ವಾಪಾಸ್ ಕರೆಸಲು ನಿರ್ಧಾರ ಕೈಗೊಂಡಿದೆ.
|