ನವದೆಹಲಿ: ಭಾರತದ ಪ್ರಧಾನ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿ., ಮಂಗಳವಾರ ತನ್ನ ಕೆಲವು ಮಾಡೆಲ್ಗಳ ಬೆಲೆಯನ್ನು 5 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳವರೆಗೆ ಏರಿಸಿದೆ.
ಕಚ್ಚಾವಸ್ತು ಬೆಲೆ ಏರಿಕೆ ಮತ್ತು ವಿದೇಶೀ ಕರೆನ್ಸಿ ವಿನಿಮಯ ದರಗಳಲ್ಲಾದ ಗಂಭೀರ ಅಂತರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾರುತಿ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಎ ಸ್ಟಾರ್ ಬೆಲೆಯನ್ನು 10 ಸಾವಿರ ರೂ. ಹೆಚ್ಚಿಸಲಾಗಿದ್ದರೆ, ಸ್ವಿಫ್ಟ್ ಮಾಡೆಲ್ನ ಪೆಟ್ರೋಲ್ ಆವೃತ್ತಿಯ ಬೆಲೆಯನ್ನು 5 ಸಾವಿರ ರೂ. ಏರಿಸಲಾಗಿದೆ. ಮಾರುತಿಯಲ್ಲಿ ಜಪಾನ್ನ ಸುಜುಕಿ ಮೋಟಾರ್ ಕಾರ್ಪೊರೇಶನ್ ಸೇ.54.2 ಪಾಲುದಾರಿಕೆ ಹೊಂದಿದೆ. |