ನವದೆಹಲಿ: ದೇಶದ ದೈತ್ಯ ವಿಮಾ ಕಂಪೆನಿ ಕಾರ್ಯದೊತ್ತಡದಿಂದಾಗಿ ಮುಂಬರುವ 2011ರೊಳಗೆ 11 ಲಕ್ಷ ವಿಮಾ ಏಜೆಂಟ್‌ರನ್ನು ನೇಮಕ ಮಾಡಿಕೊಂಡು ಸಿಬ್ಬಂದಿಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಖಾಸಗಿ ಇನ್‌ಶೂರೆನ್ಸ್ ಕಂಪೆನಿಗಳು 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದ್ದು, ನಾವು ಸುಮಾರು 11ರಿಂದ 12 ಲಕ್ಷ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಎಲ್‌ಐಸಿ ಮುಖ್ಯಸ್ಥ ಟಿ.ಎಸ್.ವಿಜಯನ್ ತಿಳಿಸಿದ್ದಾರೆ. |